ಮೈಸೂರು,ನವೆಂಬರ್, 15,2024 (www.justkannada.in): ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳನನ್ನ ಬಂಧಿಸಿ ಚಿನ್ನಾಭರಣ, ಬೆಳಿ ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ನಿವಾಸಿ ಪ್ರಸಾದ್ @ ಆಸಿಫ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಮಹಮದ್ ಮುನ್ನಾ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಬಂಧಿತನಿಂದ 36.12 ಲಕ್ಷ ಮೌಲ್ಯದ 516 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ಮೌಲ್ಯದ 28.70 ಗ್ರಾಂ ಬೆಳ್ಳಿ ಪದಾರ್ಥ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
.ದರೋಡೆಕೋರ ಪ್ರಸಾದ್ ಶ್ರೀರಂಗಪಟ್ಟಣ ತಾಲೂಕು ನಗುವಿನಹಳ್ಳಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದನು. ಈ ಮಧ್ಯೆ ಶ್ರೀರಾಂಪುರ ಚೆಕ್ ಪೋಸ್ಟ್ ಬಳಿ ಕುವೆಂಪುನಗರ ಠಾಣಾ ಪೊಲೀಸರು ತಪಾಸಣೆ ನಡೆಸುವ ವೇಳೆ ಪ್ರಸಾದ್ ನನ್ನು ವಶಕ್ಕೆ ಪಡೆದಿದ್ದು, ಸ್ಕೂಟರ್ ನಲ್ಲಿ ಪರಿಶೀಲಿಸಿದಾಗ ಕಳ್ಳತನ ಮಾಡಿದ್ದ ವಸ್ತುಗಳು ಪತ್ತೆಯಾಗಿದೆ.
ಬಂಧಿತ ಆರೋಪಿ ಪ್ರಸಾದ್ ವಿರುದ್ದ ವಿವಿದೆಡೆಗಳಲ್ಲಿ ನಡೆದ 33 ಮನೆಗಳವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ.ಎಸ್. ಮಾರ್ಗದರ್ಶನದಲ್ಲಿ, ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ಅರುಣ್ ಎಲ್,ಹಾಗೂ ಪಿಎಸ್ ಐ ಗಳಾದ ಗೋಪಾಲ್,ಮದನ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್,ಮಹೇಶ್ವರ್,ಮಂಜುನಾಥ್ ಕೆಟಿ,ಮಂಜುನಾಥ್ ಎಂಪಿ,ಯಶವಂತ್,ಮಂಜು,ಹಜರತ್,ಸುರೇಶ್,ರವಿ,ನಾಗೇಶ್ ಹಾಗೂ ಕುಮಾರ್ ರವರು ಕಾರ್ಯಾಚರಣೆ ನಡೆಸಿದರು. .
Key words: Mysore Police, arrest, House Burglar, old Jewellery