ಮೈಸೂರು,ನವೆಂಬರ್,16,2024 (www.justkannada.in): ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವುದು ಒಂದೆಡೆಯಾದರೇ ಇದೀಗ ಮತ್ತೊಂದೆಡೆ ಮುಡಾ 15 ಸಾವಿರಕ್ಕಿಂತ ಹೆಚ್ಚಿನ ನಿವೇಶನಗಳನ್ನು ಹಸ್ತಾಂತರ ಮಾಡದೆ ಪೆಂಡಿಂಗ್ ಇಟ್ಟಿಕೊಂಡಿದೆ ಎನ್ನಲಾಗಿದೆ.
ಹೌದು, ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗಬೇಕಿರುವ ಖಾಸಗಿ ಬಡಾವಣೆಗಳು ಇನ್ನೂ ಹಸ್ತಾಂತರವಾಗದೇ ಪೆಂಡಿಂಗ್ ಆಗಿವೆ. ಒಟ್ಟು 21 ಗ್ರಾಮ ಪಂಚಾಯ್ತಿಯ 202 ಸಂಖ್ಯೆಗಳ 15085 ನಿವೇಶನಗಳ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ
ಮುಡಾದಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗಬೇಕಿರುವ ಖಾಸಗಿ ಬಡಾವಣೆಗಳು ಈ ಕೆಳಕಂಡಂತಿವೆ .
ಮೈಸೂರು ಮಹಾನಗರ ಪಾಲಿಕೆಯ 291 ನಿವೇಶನಗಳು
ಹೂಟಗಳ್ಳಿ ನಗರಸಭಾ ಕಾರ್ಯಾಲಯ ವ್ಯಾಪ್ತಿಗೆ 119 ನಿವೇಶನಗಳು
ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ 1059ನಿವೇಶನಗಳು
ಕಡಕೊಳ ಪಟ್ಟಣ ಪಂಚಾಯತ್ ವ್ಯಾಪ್ತಿಗೆ 1347 ನಿವೇಶನಗಳು
ಬೋಗಾದಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ 2169 ನಿವೇಶನಗಳು
ವರುಣಾ ವ್ಯಾಪ್ತಿಗೆ 1400 ನಿವೇಶಗಳು
ವಾಜಮಂಗಲ ವ್ಯಾಪ್ತಿಗೆ 1646 ನಿವೇಶನಗಳು
ಧನಗಳ್ಳಿ ಗ್ರಾಪಂ ವ್ಯಾಪ್ತಿಗೆ 1050 ನಿವೇಶನಗಳು
ಇಲವಾಲ ಗ್ರಾಪಂ ವ್ಯಾಪ್ತಿಗೆ 1573 ನಿವೇಶನಗಳು
ಬೆಳಗೊಳ ಗ್ರಾಪಂ ವ್ಯಾಪ್ತಿಯಲ್ಲಿ 1220 ನಿವೇಶನಗಳು
ಆಲನಹಳ್ಳಿ, ದೇವನೂರು, ಗೋಪಾಲಪುರ, ನಾಗವಾಲ, ಉದ್ಬೂರು, ಸಿಂಧುವಳ್ಳಿ, ರಮ್ಮನಹಳ್ಳಿ, ಮೊಸಂಬಯ್ಯನಹಳ್ಳಿ ವ್ಯಾಪ್ತಿಯ ಸಾವಿರಾರು ಸೈಟ್ ಗಳು ಹಸ್ತಾಂತರವಾಗಬೇಕಿದೆ. ಆದರೆ ಹಸ್ತಾಂತರಕ್ಕೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ.
Key words: Muda, more than, 15 thousand, site, pending