ಮೈಸೂರು,ಸೆ,27,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವ ಆರಂಭಕ್ಕೆ ಇನ್ನ ಎರಡು ದಿನಗಳು ಬಾಕಿ ಇದ್ದು, ನಾಡಹಬ್ಬ ದಸರಾ ವೀಕ್ಷಿಸಲು ಹೊರರಾಜ್ಯದಿಂದ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಸಿಹಿಸುದ್ದಿ ಸಿಕ್ಕಿದೆ.
ಹೊರ ರಾಜ್ಯದಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಕರ್ನಾಟಕ ಮೋಟಾರು ಆ್ಯಕ್ಟ್ ನಡಿ ಹೊರರಾಜ್ಯದ ಪ್ರವಾಸಿಗರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಸರ್ಕಾರ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 9ರವರೆಗೆ ಹೊರ ರಾಜ್ಯದಿಂದ ಮೈಸೂರಿಗೆ ಬರುವ ವಾಹನಗಳು ತೆರಿಗೆ ಕಟ್ಟುವಂತಿಲ್ಲ. ಬೇರೆ ರಾಜ್ಯದಲ್ಲಿ ನೊಂದಾಯಿಸಿಕೊಂಡು ಅಲ್ಲಿ ತೆರಿಗೆ ಪಾವತಿ ಮಾಡುತ್ತಿರುವ ವಾಹನಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ. ಹಾಗೆಯೇ ಕೇಂದ್ರ ರಹದಾರಿ ಪರವಾನಗಿ ಪಡೆದುಕೊಂಡಿರುವ ವಾಹನಗಳು ಮೈಸೂರಿಗೆ ಬರಲು ತೆರಿಗೆ ಕಟ್ಟುವಂತಿಲ್ಲ. ಮೈಸೂರು ದಸರಾಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಪ್ರವಾಸಿಗರನ್ನ ಸೆಳೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ.
Key words: nadabha dasara- Good news -tourists – Mysore – outer state