ನಬಾರ್ಡ್ ನಿಂದ ರಾಜ್ಯಕ್ಕೆ ಹಣ ಕಡಿತ: ಕೇಂದ್ರದ ವಿರುದ್ದ ಸಚಿವ ಕೆ.ಎನ್ ರಾಜಣ್ಣ ಆಕ್ರೋಶ

ಬೆಂಗಳೂರು,ನವೆಂಬರ್,19,2024 (www.justkannada.in): ನಬಾರ್ಡ್ ವತಿಯಿಂದ ಕಳೆದ ವರ್ಷ 5600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಗಿತ್ತು. ಆದರೆ ಈ ವರ್ಷ 2300 ಕೋಟಿ  ರೂ. ನೀಡಿದ್ದಾರೆ. ಇದರಿಂದಾಗಿ  ರೈತರು ಸಾಲದಿಂದ ವಂಚಿತರಾಗುತ್ತಾರೆ. ರೈತರು ಬೇರೆಡೆ ಸಾಲ ಪಡೆದು ತೊಂದರೆಗೆ ಸಿಲುಕುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಸಹಕಾರ ಸಚಿವ ಕೆಎನ್ ರಾಜಣ್ಣಕಿಡಿಕಾರಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ರೈತರು ಆರ್ಥಿಕವಾಗಿ ಮೇಲೆ‌ ಬರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಯಾಗಬೇಕು. ಇದು ನಮ್ಮ ಸರ್ಕಾರದ ಉದ್ದೇಶ. ಪ್ರತಿವರ್ಷ ಸಾಲಸೌಲಭ್ಯ ನೀಡ್ತೇವೆ. ಬಿತ್ತನೆ ಬೀಜ, ಗೊಬ್ಬರ ನೀಡುತ್ತೇವೆ. ನಬಾರ್ಡ್ ನವರು ನಮಗೆ ಹಣ ನೀಡುತ್ತಿದ್ದರು. 4.5% ಬಡ್ಡಿ ದರದರಲ್ಲಿ ನಮಗೆ ಕೊಡುತ್ತಿದ್ದರು. ನಾವು ರೈತರಿಗೆ ಶೂನ್ಯ‌ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದೇವು. 1200 ಕೋಟಿಯಷ್ಟು ಸರ್ಕಾರ ಇದನ್ನ ತುಂಬುತ್ತಿತ್ತು. ನಬಾರ್ಡ್ ನಿಂದ 5600 ಕೋಟಿ ಬರುತ್ತಿತ್ತು. ಅದರ ಹಿಂದಿನ ವರ್ಷ 5400 ಕೋಟಿ ನೀಡಿದ್ದರು. ಈ ಬಾರಿಯೂ ನಾವು ನಬಾರ್ಡ್ ಗೆ ಮನವಿ ಸಲ್ಲಿಸಿದ್ದೆವು. 5600 ಕೋಟಿಗೂ ಹೆಚ್ಚು ಹಣ ಕೊಡ್ತಾರೆಂಬ ನಿರೀಕ್ಷೆ ಇತ್ತು. ಈ ಭಾರಿ 3240  ಕೋಟಿ ಹಣ ಕಡಿಮೆ ಬಂದಿದೆ. ಇದರಿಂದ ರೈತರಿಗೆ ಸಾಲ ನೀಡುವುದು ಕಷ್ಟ. ರೈತರ ಬೇರೆಡೆ ಸಾಲ ಪಡೆದು ತೊಂದರೆಗೆ ಸಿಲುಕುತ್ತಾರೆ. ಈ ಬಗ್ಗೆ ಕೇಂದ್ರ ಅರ್ಥ ಸಚಿವರಿಗೆ ಪತ್ರ ಬರೆದಿದ್ದೆ. ಫರ್ದರ್ ಇನ್ ಸ್ಟ್ರಕ್ಷನ್ ಅಂತ ಪತ್ರ ಅಲ್ಲಿಂದ ಬಂದಿದೆ. ನಮ್ಮ ರಾಜ್ಯದ ಸಂಸದರಿಗೆ ನಾನು‌ ಮನವಿ ಮಾಡುತ್ತೇನೆ. ಕೇಂದ್ರದ ಮೇಲೆ ಒತ್ತಡ ಹೇರಿ ಎಂದು ಆಗ್ರಹಿಸಿದರು.

ರೈತರು ಸಾಲದಿಂದ ವಂಚಿತರಾಗುತ್ತಿದ್ದಾರೆ. ಈ ಸಂಬಂಧ ಫೈನಾನ್ಸ್ ಮಿನಿಸ್ಟರ್ ಗೆ ಪತ್ರ ಬರೆದಿದ್ದೆ. ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದೆ. ಅಲ್ಲಿಂದ ಯಾವುದೇ ಸಕಾರಾತ್ಮಕ ಪತ್ರ ಬಂದಿಲ್ಲ. ಅದಕ್ಕೆ ಇಂತಹ ತೀರ್ಮಾನಗಳು‌ ಮಾರಕ. ಕೇಂದ್ರದ ತೀರ್ಮಾನಗಳು‌ ಮಾರಕವಾಗಿವೆ. NDRF ನಿಂದ ಬರುವುದು ಕಡಿಮೆಯಾಗಿದೆ. ರೈತರು ಸಾಲಮನ್ನಾ ಮಾಡಿ ಅಂತಿದ್ದಾರೆ. ಇತ್ತ ಸಾಲ ಸೌಲಭ್ಯವೂ ಕಡಿಮೆ ಇದೆ ರೈತರು ಏನು ಮಾಡಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಕೇಂದ್ರದ ಮೇಲೆ ಹರಿಹಾಯ್ದರು.

ಶೆಟ್ಟರ್ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರು. ಸಿದ್ದರಾಮಯ್ಯ 50 ಸಾವಿರ ಸಾಲ ಮನ್ನಾ ಮಾಡಿದ್ದರು. ಕುಮಾರಸ್ವಾಮಿ 1 ಲಕ್ಷದವರೆಗೆ ಸಾಲ ಮನ್ನಾ ಮಾಡಿದ್ದರು. ನಾವು ಕೇಂದ್ರಕ್ಕೆ ಮನವಿ ಮಾಡಿದ್ದೆವು. ರೈತರ ಸಾಲ ಮನ್ನಾ ಮಾಡಿ ಎಂದಿದ್ದೆವು. ಆದರೆ ಆರ್ಥಿಕ ದಿವಾಳಿ ಆಗುತ್ತೆ ಅಂದರು.  ಆದರೆ ಕಾರ್ಪೋರೇಟ್ ಸಂಸ್ಥೆಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು.  ಆದರೆ ರೈತರ ಸಾಲ ಮನ್ನಾ ಮಾಡೋಕೆ ಹಿಂದೇಟು ಹಾಕಿದರು. ಆರ್ಥಿಕ ಅಲ್ಲೋಲ ಕಲ್ಲೋಲ ಅಂತ ಹೇಳ್ತಾರೆ. ರೈತರ ಬಗ್ಗೆ ಕೇಂದ್ರ ತಾರತಮ್ಯ ಧೋರಣೆ ತಾಳುತ್ತಿದೆ. ರೈತರ ಬಗ್ಗೆ ಕೇಂದ್ರಕ್ಕೆ ಕಳಕಳಿಯೇ ಇಲ್ಲ. ರೈತರ ಸಾಲ ಮನ್ನಾ ಮಾಡಿದರೆ ಅಲ್ಲೋಲ ಕಲ್ಲೋಲವಂತೆ. ಆದರೆ ಕಾರ್ಪೋರೇಟ್ ನವರ ಸಾಲ ಮನ್ನಾ ಮಾಡಬಹುದಂತೆ. ಇದು ಕೇಂದ್ರ ಸರ್ಕಾರದ ಧೋರಣೆ. ಇವರು ರೈತರ ಪರವಾಗಿ ಇದ್ದಾರಾ? ಇದನ್ನ ದೇಶದ ಜನರೇ ತಿಳಿದುಕೊಳ್ಬೇಕು ಎಂದು ಕೇಂದ್ರದ ವಿರುದ್ಧ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೋರೇಟ್ ಟ್ಯಾಕ್ಸ್ 20% ಸೆಸ್ ಇಳಿಸಿದೆ. ಕೇಂದ್ರ ಸರ್ಕಾರ ಅವರ ತೆರಿಗೆ ಸೆಸ್ ಇಳಿಸಿದೆ ಆದರೆ ಸಹಕಾರಿಗಳಿಗೆ ಸೆಸ್ ಇಳಿಸಿಲ್ಲ. ಹಾಗಾಗಿ ಕೇಂದ್ರ ರೈತ ವಿರೋಧಿ ಸರ್ಕಾರ, ರೈತರ ಅಭ್ಯುದಯಕ್ಕೆ ಕೇಂದ್ರ ಮುಂದಾಗಬೇಕು. ಶೂನ್ಯ ಬಡ್ಡಿಯಲ್ಲಿ ಸಾಲ ಸೌಲಭ್ಹ ಒದಗಿಸಬೇಕು. ಹಣಕಾಸು ಲಭ್ಯತೆ ಹೆಚ್ಚಿಸಿಕೊಡಬೇಕು ಎಂದು ಕೇಂದ್ರಕ್ಕೆ ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದರು.

ಹಳ್ಳಿಯಿಂದ ಇವತ್ತು ಪಟ್ಟಣಕ್ಕೆ ವಲಸೆ ಹೆಚ್ಚಿದೆ. ಇಂದು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಈ . ಪರಿಸ್ಥಿತಿಯನ್ನ ತಪ್ಪಿಸಬೇಕು. ರೈತರ ಆರ್ಥಿಕಾಭಿವೃದ್ಧಿಗೆ ಗಮನ ಕೊಡಬೇಕು. ರೈತರ ಪದಾರ್ಥಗಳಿಗೆ ನಿರ್ದಿಷ್ಟ ಬೆಲೆಯಿಲ್ಲ. ಕಾಫಿ, ಟೀಗೆ ನಿರ್ದಿಷ್ಟವಾದ ಬೆಲೆಯಿದೆ. ಆದರೆ ಅವರ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡುವ ಶಕ್ತಿ ರೈತರಿಗಿಲ್ಲ. ರೈತರ ಉತ್ಪನ್ನಗಳಿಗೆ ಬೆಲೆ ಹೆಚ್ಚಬೇಕು. ಹಾಗಾಗಬೇಕಾದರೆ ರೈತರರಿಗೆ ಸ್ಪಂದಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಜಿಎಸ್ ಟಿಯಲ್ಲೂ ಕರ್ನಾಟಕಕ್ಕೆ ಅನ್ಯಾಯ, ಅತಿ ಹೆಚ್ಚು ತೆರಿಗೆ ಕಟ್ಟುವುದು ನಾವು. 4 ಲಕ್ಷ 50 ಸಾವಿರ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ಬರುವುದು ಕೇವಲ 52 ಸಾವಿರ ಕೋಟಿ. ಪ್ರದಾನಿ ಅವಾಸ್ ಯೋಜನೆಯಡಿ ಹಣ ನೀಡುತ್ತೆ, ೩.೨೦ ಲಕ್ಷ ಹಣವನ್ನ ಕೇಂದ್ರ ಕೊಡುತ್ತೆ. 28 % ಜಿಎಸ್ ಟಿಯನ್ನ ಅದರಲ್ಲಿ ಕಟ್ ಮಾಡುತ್ತೆ. ಬಡವರ ಯೋಜನೆಯಲ್ಲೇ ಹಣ ಕಟ್ ಆಗುತ್ತೆ. ಇದು ಸಾಮಾನ್ಯರ ಮೇಲೆ‌ದುಷ್ಪರಿಣಾಮ ಆಗುತ್ತದೆ. ಕೇಂದ್ರದ ವಿರುದ್ಧ ಸಹಕಾರ ಸಚಿವ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸಹಕಾರ ಸಂಘಗಳಿಂದ ಸಾಲ , ಶೂನ್ಯ ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡ್ತೇವೆ, ಇದಕ್ಕೆ ಪೂರಕವಾಗಿ ನಬಾರ್ಡ್ ಹಣ ನೀಡುತ್ತದೆ. 4.5 ಪರ್ಸೆಂಟ್ ಬಡ್ಡಿದರಲ್ಲಿ ಕೊಡ್ತಿತ್ತು, 5600 ಕೋಟಿ ಜಾಗದಲ್ಲಿ 2300 ಕೋಟಿ ಬಂದಿದೆ. ಹೀಗಾಗಿ ರೈತರಿಗೆ ಸಾಲ ಸೌಲಭ್ಯ ಎಲ್ಲಿ ಬರುತ್ತದೆ. ರೈತರು ಖಾಸಗಿಯವರ ಬಳಿ ‌ಹೋಗ್ತಾರೆ. ಅಲ್ಲಿ ಹೆಚ್ಚಿನ ಬಡ್ಡಿಗೆ ದಿವಾಳಿಯಾಗ್ತಾರೆ. ಹಾಗಾಗಿ ರೈತರ ಅಭಿವೃದ್ಧಿ ಎಲ್ಲಿ ಆಗುತ್ತದೆ. 1200 ಕೋಟಿ ಶೂನ್ಯ ಬಡ್ಡಿಯಲ್ಲಿ ಕೊಟ್ಟಿದ್ದೆವು, ನಮಗೆ 9000 ಕೋಟಿ ಅನಿವಾರ್ಯತೆ ಇದೆ. ನಬಾರ್ಡ್  ಹಣ ಕೊಡಬೇಕೆಂದು ಒತ್ತಾಯಿಸುತ್ತೇವೆ ಎಂದು ಸಚಿವ ರಾಜಣ್ಣ ತಿಳಿಸಿದರು.

Key words: Minister, K.N. Rajanna, NABARD, funds, state