ಸರಕಾರಿ ಶಾಲೆಗಾಗಿ ಇಲ್ಲೊಂದು “ವಾಟ್ಸ್‌ ಅಪ್‌ “ ಗ್ರೂಪ್‌ ನ ಸೈಲೆಂಟ್‌ “ ಕ್ರಾಂತಿ”.!

Here's a silent "revolution" of a "WhatsApp" group for a government school! The WhatsApp group “We Are for Government Schools” includes 121 members from various walks of life, including government officials, retired officials, teachers, scientists, etc. This group, which was started two years ago, has members not only from Mysore but also from various towns in the state.

ಮೈಸೂರು, ನ.19.2024: (www.justkannada.in news) ಸೋಷಿಯಲ್‌ ಮೀಡಿಯಾಗಳಿಂದ ನಾಕರಾತ್ಮಕ ಸಂಗತಿಗಳೇ ಹೆಚ್ಚಾಗಿ ಕೇಳಿ ಬರುತ್ತಿರುವ ವೇಳೆಯಲ್ಲೇ ಇಲ್ಲೊಂದು “ವಾಟ್ಸ್‌ ಅಪ್‌ “ ಗ್ರೂಪ್‌ ನ ಸದಸ್ಯರು ಸರಕಾರಿ ಶಾಲೆಗೆ ಮೂಲ ಸವಲತ್ತು ಕಲ್ಪಿಸಲು ಪಣತೊಟ್ಟಿದ್ದಾರೆ.

ಸರಕಾರಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಶಿಕ್ಷಕರು, ವಿಜ್ಞಾನಿಗಳು ಹೀಗೆ ಸಮಾಜದ ವಿವಿಧ ಸ್ಥರಗಳ ೧೨೧ ಸದಸ್ಯರನ್ನು ಒಳಗೊಂಡಿದೆ “ ಸರ್ಕಾರಿ ಶಾಲೆಗಾಗಿ ನಾವು ನೀವು “ ಎಂಬ  ವಾಟ್ಸಾಪ್ ಗ್ರೂಪ್.‌ ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಈ ಗ್ರೂಪ್‌ ನಲ್ಲಿ ಮೈಸೂರು ಮಾತ್ರವದಲ್ಲದೆ ರಾಜ್ಯದ ವಿವಿಧ ಊರಿನವರು ಸದಸ್ಯರಾಗಿದ್ದಾರೆ. ಈ ತನಕ ೧೨೦ ಕೊಡಗೈ ಕಾರ್ಯಕ್ರಮಗಳನ್ನು ಮಾಡಿದೆ. ಗುಂಪಿನ ಸದಸ್ಯರು ತಮ್ಮ ಹುಟ್ಟು ಹಬ್ಬದ ಸಂಭ್ರಮದ ಸಲುವಾಗಿ ಅಥವಾ ಕುಟುಂಬದ ಸಂತಸದ ಕ್ಷಣಗಳು ಹಾಗೂ ಆಪ್ತರ ನೆನಪಿನಾರ್ಥ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ದಾನವಾಗಿ ನೀಡುತ್ತಾ ಬಂದಿದ್ದಾರೆ.

“ ಸರ್ಕಾರಿ ಶಾಲೆಗಾಗಿ ನಾವು ನೀವು “ ಎಂಬ  ವಾಟ್ಸಾಪ್ ಗ್ರೂಪಿನ ಸದಸ್ಯರು ಸರಕಾರಿ ಶಾಲೆ ಉನ್ನತೀಕರಣ ಕೈಕಂರ್ಯದಲ್ಲಿ ತೊಡಗಿದ್ದು ಹಸಿರು ಬ್ರೋಡ್‌, ಊಟದ ತಟ್ಟೆ-ಲೋಟಗಳು, ಮಿಕ್ಸಿ, ಕುಕ್ಕರ್‌ ..ಹೀಗೆ ನಾನಾ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆ ನೀಡಿದ್ದಾರೆ.

ಇಂದು ಮೈಸೂರಿನ ವಸಂತ್‌ ಮಹಲ್‌ ನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಸಂಸ್ಥೆಯ ಮಹಿಳಾ ಪ್ರಶಿಕ್ಷಣಾರ್ಥಿಗಳ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಿಷನ್ ಹಾಗೂ ಪ್ಯಾಡ್ ವೈಡಿಂಗ್ ಮಿಷನ್  ಕೊಡುಗೆ ನೀಡಿದ್ದಾರೆ. ಇದನ್ನು ಸ್ಥಳೀಯ ಶಾಸಕ  ಶ್ರೀವತ್ಸ ಅವರು ಸಂಸ್ಥೆಯ ಪ್ರಾಂಶುಪಾಲರಾದ ಗೀತಾಂಬಾ ಮತ್ತು ಅಲ್ಲಿಯ ಪ್ರಶಿಕ್ಷಣಾರ್ಥಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರುಗಳು ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದು, ಶಾಸಕರಿಗೆ ಶೌಚಾಲಯದ ನಿರ್ಮಾಣ ಮತ್ತು ಮಧ್ಯಾಹ್ನ ಊಟ ಮಾಡಲು ಭೋಜನಾಲಯವನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.

ಇದಕ್ಕೆ ಶಾಸಕರು ಸ್ಪಂದಿಸಿ  ಭವಿಷ್ಯತ್ತಿನ ಪ್ರಜೆಗಳನ್ನು ನಿರ್ಮಿಸುವ ಪ್ರಶಿಕ್ಷಣಾರ್ಥಿಗಳಾದ ತಾವು ಉತ್ತಮ ಮೌಲ್ಯವುಳ್ಳ ಪ್ರಜೆಗಳನ್ನು ನಿರ್ಮಿಸಿ ಸುಭದ್ರ ಭಾರತದ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ತಾವುಗಳು ನೀಡುವಂತೆ ಕೋರಿಕೊಂಡರು.

ಪ್ರಶಿಕ್ಷಣಾರ್ಥಿಗಳಾದ ತಾವುಗಳು ನೀಡಿರುವ ಮನವಿಯು ಪೂರಕವಾಗಿದ್ದು ನಿಮಗೆ ನಾನು  ಈ ಕ್ಷೇತ್ರದ ಶಾಸಕನಾಗಿ ಉತ್ತಮ ವಾತಾವರಣವನ್ನು ನಿಮ್ಮ ಸಂಸ್ಥೆಗೆ ನಿರ್ಮಿಸಿಕೊಟ್ಟಲ್ಲಿ ಭವಿಷ್ಯ ಭಾರತವು ಉತ್ತಮವಾಗಿರುತ್ತದೆ ಎಂಬ ಮನವರಿಕೆ ನನಗಾಗಿದೆ ಆದುದರಿಂದ ನಿಮ್ಮ  ಈ ಬೇಡಿಕೆಯನ್ನು ಈ ವರ್ಷದೊಳಗಾಗಿ ಈಡೇರಿಸಿ ಕೊಡುವುದಾಗಿ ತಿಳಿಸಿದರು.

key words: silent “revolution”, of a “WhatsApp” group, for a government school

SUMMARY:

The WhatsApp group “We Are for Government Schools” includes 121 members from various walks of life, including government officials, retired officials, teachers, scientists, etc. This group, which was started two years ago, has members not only from Mysore but also from various towns in the state.