ಬೆಂಗಳೂರು,ನವೆಂಬರ್,20,2024 (www.justkannada.in): ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದುಪಡಿಸುತ್ತಿದ್ದು ಈ ಮಧ್ಯೆ ಬಡವರ ಕಾರ್ಡ್ ಗಳೂ ಸಹ ರದ್ದಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರು ಕಾರ್ಡ್ ರದ್ದಾದವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಇಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಮತ್ತು ನಂದಿನಿ ಲೇಔಟ್ ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಬಿಪಿಎಲ್ ಕಾರ್ಡ್ ರದ್ದಾದವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕಾರ್ಡ್ ರದ್ದಾಗಿದ್ದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕಾರ ಮಾಡಿದರು. ಆರ್ ಅಶೋಕ್ ಅವರಿಗೆ ಶಾಸಕರಾದ ಅಶ್ವಥ್ ನಾರಾಯಣ್ ಗೋಪಾಲಯ್ಯ ಸಾಥ್ ನೀಡಿದರು.
ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಲಂಚ ತೆಗೆದುಕೊಳ್ಳುವುದಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಲಂಚ ಕೊಟ್ಟು ಕಾರ್ಡ್ ಕೊಟ್ಟಿದ್ದೀರಾ. ಈಗ ಲಂಚ ಬರುತ್ತಿಲ್ಲವಾ? ಈ ಸರ್ಕಾರದಲ್ಲಿ ಬಡವರ ಬಿಪಿಎಲ್ ಕಾರ್ಡುಗಳು ರದ್ದಾಗುವುದು ಗ್ಯಾರಂಟಿ ಎಂದು ಹರಿಹಾಯ್ದಿದ್ದಾರೆ.
Key words: BJP leaders, visit, residences, BPL cards, cancelled