ನವದೆಹಲಿ,ನವೆಂಬರ್,21,2024 (www.justkannada.in): ಬಿಜೆಪಿಯವರು ಆಹಾರ ಭದ್ರತಾ ಕಾಯ್ದೆಯನ್ನೇ ವಿರೋಧಿಸಿದ್ದರು. ಈಗ ಬಿಪಿಎಲ್ ಕಾರ್ಡ್ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಕ್ತಿ ಯೋಜನೆ ಪರಿಷ್ಕರಣೆ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಲ್ಲ. ಗ್ಯಾರಂಟಿ ಯೋಜನೆಗೆ ಬಿಜೆಪಿಯವರ ಬಳಿ ದುಡ್ಡು ಕೇಳಿದ್ವಾ..? ಎಂದು ಪ್ರಶ್ನಿಸಿದರು.
ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆ ರಾಜ್ಯಸಭೆಯಲ್ಲಿ ಮಂಡಿಸಿದಾಗ ವಿರೋಧಿಸಿದರು ಮುರುಳಿ ಮನೋಹರ್ ಜೋಶಿ. ನಾನು ಈ ಹಿಂದೆ ಸಿಎಂ ಆಗಿದ್ದಾಗ 7 ಕೆಜಿ ಅಕ್ಕಿ ಕೊಡತ್ತಿದ್ದೆ. ಬಿಎಸ್ ವೈ ಸಿಎಂ ಆದ ಬಳಿಕ 7 ರಿಂದ 5ಕೆಜಿಗೆ ಇಳಿಸಿದರು ಅಂದಿನ ಬಿಎಸ್ ವೈ ಸಂಫುಟದಲ್ಲಿ ಸಚಿವರಾಗಿದ್ದರು ಅಶೋಕ್ ಏಕೆ ಕೇಳಲಿಲ್ಲ. ಬಡರವವ ಬಗ್ಗೆ ಮಾತನಾಡೋದು ಬಹಳ ಸುಲಭ. ಬಿಜೆಪಿ ನಾಯಕರು ಆಹಾರ ಭದ್ರತಾ ಕಾಯ್ದೆಯನ್ನೇ ವಿರೋಧಿಸಿದರು ಎಂದು ಹರಿಹಾಯ್ದರು.
Key words: BJP, opposes, Food Security Act, CM Siddaramaiah