ಸಿದ್ದರಾಮಯ್ಯ ವಿರುದ್ಧ ಸಿಡಿದು ನಿಂತಿದ್ದಕ್ಕೆ ಬೆಲೆ ತೆತ್ತಿದ್ದಾರೆ- ಮೈತ್ರಿ ಪಕ್ಷಗಳ ವಿರುದ್ದ ಎಸ್ .ಟಿ ಸೋಮಶೇಖರ್ ವಾಗ್ದಾಳಿ

ಬೆಂಗಳೂರು,ನವೆಂಬರ್,25,2024 (www.justkannada.in):  ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಡೆವಲಪ್ ಆಧಾರದ‌ ಮೇಲೆ ಮತ ಕೇಳಲಿಲ್ಲ. ಸಿದ್ದರಾಮಯ್ಯ ವಿರುದ್ಧ ಸಿಡಿದು ನಿಂತಿದ್ದಕ್ಕೆ ಬೆಲೆ ತೆತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಎಸ್.ಟಿ ಸೋಮಶೇಖರ್,  ಯಶವಂತಪುರಕ್ಕೆ ೭೫ ಕೋಟಿ ಕೊಟ್ಟಿದ್ದಾರೆ. ನಗರೋತ್ಥಾನದಡಿ ಅನುದಾನ ಕೊಟ್ಟಿದ್ದಾರೆ. ಅದಕ್ಕೆ‌ ಅವರಿಗೆ ವಿಶ್ ಮಾಡಿದ್ದೇನೆ. ಚನ್ನಪಟ್ಟಣ ನನ್ನ ಹುಟ್ಟೂರು. ಅಲ್ಲಿಗೆ ಅನುದಾನ ಬೇಗ ಬಿಡುಗಡೆ ಮಾಡಿ ಎಂದಿದ್ದೇನೆ. ಚನ್ನಪಟ್ಟಣ ಚುನಾವಣೆ ಮೊದಲೇ ಹೇಳಿದ್ದೆ. ಬಿಜೆಪಿ ತನುಮನ ದನ ಎಲ್ಲವನ್ನ ಅರ್ಪಸಿದ್ರು. ಜೆಡಿಎಸ್ ನವರು ತನುಮನ ದನ ಅಪ್ರಿಸಿದ್ರು. ಯೋಗೇಶ್ವರ್ ಗೆ ಇಬ್ಬರೂ‌ ಅರ್ಪಸಿದ್ರು. ಕುಮಾರಸ್ವಾಮಿ ಕೋಪ ನಿಖಿಲ್‌ ಮೇಲೆ ತೋರಿಸಿದ್ದಾರೆ. ಅವರು ಎಲ್ಲೂ ಯೋಜನೆ ಬಗ್ಗೆ ಮಾತನಾಡಿಲ್ಲ. ಕೇಂದ್ರದಿಂದ ಯೋಜನೆ ತರ್ತೇವೆ ಅನ್ನಲಿಲ್ಲ. ಬರಿ ಸಿದ್ದರಾಮಯ್ಯ ವಿರುದ್ಧವೇ ಸಿಡಿದು ನಿಂತ್ರು. ಅದಕ್ಕೆ ಜನ ಯೋಗೇಶ್ವರ್ ಗೆಲ್ಲಿಸಿದರು ಎಂದರು.

ಡೆವಲಪ್ ಆಧಾರದ‌ ಮೇಲೆ ಮತ ಕೇಳಲಿಲ್ಲ. ಮೂಡಾದಲ್ಲಿ ಸಿಗಿಸ್ತೇನೆ, ಸಿಎಂ ತೆಗೆಯುತ್ತೇನೆ. ಸರ್ಕಾರವನ್ನ ಕಿತ್ತೆಸೆಯುತ್ತೇನೆ ಅಂತ ಭಾಷಣ ಮಾಡಿದ್ರು. ಕುಮಾರಸ್ವಾಮಿ ಚುನಾವಣೆಯಲ್ಲಿ ಭಾಷಣ ಮಾಡಿದ್ರು. ದೇವೇಗೌಡರು ಡಿಕೆ ಬಗ್ಗೆ ಮಾತನಾಡಿದ್ರು. ರೌಡಿ ಅತ್ರ ಇದ್ದ ಅಂತ ಹೇಳಿದ್ರು. ಹೀಗಾಗಿ ಜನ ತಮ್ಮ ಕೋಪ ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಮೂರು ಚುನಾವಣೆಗಳಲ್ಲಿ ಸೋಲಾಗಿದೆ. ಅದು‌ ಕಾಂಗ್ರೆಸ್ಸಿಗೆ ಲಾಭವಾಗಿದೆ. ನನಗೆ ಸಂಡೂರು, ಶಿಗ್ಗಾಂವಿ ಬಗ್ಗೆ ಗೊತ್ತಿಲ್ಲ. ಚನ್ನಪ್ಟಣದಷ್ಟೇ ನನಗೆ ಗೊತ್ತಿರೋದು. ಇವರು ಡೆವಲಪ್ ಮೆಂಟ್ ಮೇಲೆ ಮತ ಕೇಳಬೇಕಿತ್ತು. ಇವರು ಆ ರೀತಿ ಮಾಡಲಿಲ್ಲ. ಡಿಕೆ ವಿರುದ್ಧ ಮಾತನಾಡಬಾರದಿತ್ತು. ಸಿದ್ರಾಮಯ್ಯನವರ ವಿರುದ್ಧ ಮಾತನಾಡಬಾರದಿತ್ತು. ಮಾತನಾಡಿದ್ದಕ್ಕೆ ಹೊಡೆತ ಬಿದ್ದಿದೆ. ಜಮೀರ್ ಹೇಳಿಕೆಗೆ ಪರಿಣಾಮ ಆಗಲಿಲ್ಲ. ಯಾವ ಕಣ್ಣೀರಿಗೂ ಜನ ಕರಗಲಿಲ್ಲ. ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಹೇಳಿಕೆ ಪರಿಣಾಮ ಆಗಲಿಲ್ಲ. ಯಾವ ಸಮಯ ಕಣ್ಣೀರು ಹಾಕ್ತಾರೆ ಜನರಿಗೆ ಗೊತ್ತಿದೆ. ಅದಕ್ಕೆ ಈ ಭಾರಿ ಬೆಲೆ ತೆತ್ತಿದ್ದಾರೆ ಎಂದು ಹರಿಹಾಯ್ದರು.

Key words: S.T. Somashekar, bjp, jds