ರೇಣುಕಾಸ್ವಾಮಿಯನ್ನ ಬಲವಂತದಿಂದ ಕಿಡ್ನಾಪ್ ಮಾಡಿದ ಬಗ್ಗೆ ಸಾಕ್ಷ್ಯ ಇಲ್ಲ- ಹೈಕೋರ್ಟ್ ನಲ್ಲಿ ನಟ ದರ್ಶನ್ ಪರ ವಾದ

ಬೆಂಗಳೂರು,ನವೆಂಬರ್,26,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.

ಹೈಕೋರ್ಟ್ ನ್ಯಾಯಮೂರ್ತಿ ನ್ಯಾ ವಿಶ್ವಜಿತ್ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ಯಾವುದೇ ಮೋಸದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಲಾಗಿಲ್ಲ.  ಬಲವಂತದಿಂದ ಅಪರಹಣ ಮಾಡಿದ ಬಗ್ಗೆ ಸಾಕ್ಷ್ಯ ಇಲ್ಲ . ಚಿತ್ರದುರ್ಗದಿಂಧ ಬೆಂಗಳೂರಿಗೆ ಒತ್ತಾಯದಿಂದ ಕರೆತಂದ ಬಗ್ಗೆ ಸಾಕ್ಷಿ ಇಲ್ಲ ಎಂದು ತಿಳಿಸಿದ್ದಾರೆ.

ಮೃತನ ತಂದೆಯ ಹೇಳಿಕೆ ಪಡೆಯಲಾಗಿದೆ  ಅದರಲ್ಲಿ ಜೂ 8 ರಂದು ರೇಣುಕಾಸ್ವಮಿ ಎಂದಿನಂತೆ ಕೆಲಸಕ್ಕೆ ಹೋಗಿದ್ದನು . ಹಳೆಯ ನಾಲ್ಕು ಸ್ನೇಹಿತರೊಂದಿಗೆ ಹೋಗುತ್ತೇನೆ ಎಂದು ತಾಯಿಗೆ ಹೇಳಿದ್ದ.  ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿಲ್ಲ ಕಿಡ್ನಾಪ್ ನಲ್ಲಿ ನಟ ದರ್ಶನ್ ಭಾಗಿಯಾದ ಬಗ್ಗೆ ಸಾಕ್ಷಿ ಇಲ್ಲ. ರೇಣುಕಾಸ್ವಾಮಿ ಸ್ವ ಇಚ್ಚೆಯಿಂದಲೇ ಬಂದಿದ್ದಾನೆ. ಆತ ದಿನನಿತ್ಯ ಧರಿಸುವ ಯುನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರಲ್ಲ ಎಂದು ರೇಣುಕಾಸ್ವಾಮಿ ಫೋನ್ ಮಾಡಿ ಹೇಳಿದ್ದ ಹೀಗಾಗಿ ಕಿಡ್ನಾಪ್ ಎಂದು ಹೇಳಲು ಸಾಧ್ಯವಿಲ್ಲ ಇದರಲ್ಲಿ ಒತ್ತಾಯವು ಇಲ್ಲ. ಮೋಸವೂ ಇಲ್ಲ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.

Key words: Renukaswamy, murder case, actor Darshan, High Court