ಬೆಂಗಳೂರು,ನವೆಂಬರ್,27,2024 (www.justkannada.in): ಮುಡಾದಲ್ಲಿ ನಡೆದಿರುವ 5 ಸಾವಿರ ಕೋಟಿ ಅಕ್ರಮದ ಕುರಿತು ತನಿಖೆಯಾಗಬೇಕು ಎಂದು ದೂರುದಾರ ಗಂಗರಾಜು ಆಗ್ರಹಿಸಿದರು.
ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಇಡಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಲು ಇಡಿ ಕಚೇರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ದೂರುದಾರ ಗಂಗರಾಜು, ಈ ಹಿಂದೆ ಬಂದಾಗ ಕೆಲ ದಾಖಲೆಗಳನ್ನ ನೀಡಿದ್ದೆ. ಅಂದು ಹೇಳಿಕೆ ದಾಖಲಿಸಿರಲಿಲ್ಲ. ಇವತ್ತು ಹೇಳಿಕೆ ದಾಖಲಿಸಬಹುದು. ಮುಡ ಅಕ್ರಮ ಕುರಿತ ದಾಖಲೆಗಳನ್ನ ತೆಗೆದುಕೊಂಡು ಬಂದಿದ್ದೇನೆ. ಕೇವಲ ಸಿಎಂ ಸಿದ್ದರಾಮಯ್ಯ ಪಡೆದಿದ್ದ ಸೈಟ್ ಗಳು ಮಾತ್ರ ಅಲ್ಲ ಮುಡಾದಲ್ಲಿ ನಡೆದ 5 ಸಾವಿರ ಕೋಟಿ ಅಕ್ರಮದ ಬಗ್ಗೆ ತನಿಖೆಯಾಗಬೇಕು. ಆ ನಿಟ್ಟಿನಲ್ಲಿ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನ ತಂದಿದ್ದೇನೆ ಎಂದಿದ್ದಾರೆ.
Key words: muda case, ED, Gangaraju, hearing