ಕಗ್ಗಂಟಾದ ಜಮೀನು ಮಾರಾಟ:  ಚಿಕ್ಕಪ್ಪನ ವಿರುದ್ದವೇ ಕೋರ್ಟ್ ಮೆಟ್ಟಿಲೇರಿದ ಮೈಲಾರಯ್ಯನ ಮಕ್ಕಳು..!

ಮೈಸೂರು,ನವೆಂಬರ್,27,2024 (www.justkannada.in): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎ4 ಆರೋಪಿ ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು ಜಮುನಾ  ಸಿಎಂ  ಸಿದ್ದರಾಮಯ್ಯ ಕುಟುಂಬದ ವಿರುದ್ದ ಹಾಗೂ ಸ್ವಂತ ಚಿಕ್ಕಪ್ಪ ದೇವರಾಜು  ಕುಟುಂಬದವರನ್ನು ಎದುರಾಳಿ ಮಾಡಿ ಕೇಸ್ ದಾಖಲಿಸಿದ್ದು, ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ.

ಈ ಮಧ್ಯೆ ಈ ಜಮೀನು ಮಾರಾಟ ಕಗ್ಗಂಟಾಗಿದ್ದು ಚಿಕ್ಕಪ್ಪ ದೇವರಾಜು ವಿರುದ್ದವೇ ಮೈಲಾರಯ್ಯನ ಮಕ್ಕಳಾದ ಜಮುನಾ ಮತ್ತು ಮಂಜುನಾಥ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಮೀನನ್ನು ಮೋಸ ಮಾಡಿ ಮಾರಾಟ ಮಾಡಿದ್ದಾರೆ ದೇವರಾಜು ವಿರುದ್ದ ಆರೋಪ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೈಲಾರಯ್ಯ ಮಗ ಮಂಜುನಾಥಸ್ವಾಮಿ, ನನ್ನ ಚಿಕ್ಕಪ್ಪ ದೇವರಾಜು ಖಾತೆ ಮಾಡಿಸಿಕೊಡುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾರೆ. ನಮ್ಮ ಗಮನಕ್ಕೆ ತಾರದೆ ಭೂಮಿ ಮಾರಾಟ ಮಾಡಿದ್ದಾರೆ. ನಾನು ನನ್ನ ತಾಯಿ ಇಬ್ಬರು ಕೂಡ ಸಹಿ ಹಾಕಿದ್ದವು. ಜಮೀನು ನಿನ್ನ ಹೆಸರಿಗೆ ಮಾಡಿಕೊಡುತ್ತೇನೆ ಅಂತ ಹೇಳಿದರು. ಆ ಕಾರಣಕ್ಕೆ ಸಹಿ ಹಾಕಿದ್ದೇವೆ. ಆದರೆ ನಮ್ಮ ಹೆಸರಿಗೆ ಜಮೀನು ಮಾಡಿಕೊಡದೆ ಮೋಸ ಆಗಿದೆ. ಮೋಸ ಮಾಡಿ ಅವರ ಹೆಸರಿಗೆ ಜಮೀನು ಮಾಡಿಕೊಂಡು ಮಾರಾಟ ಮಾಡಿದ್ದಾರೆ. ನಾನು ಸಹಿ ಹಾಕಿರುವ ಕಾರಣ ನನ್ನ ಅಕ್ಕ ನನ್ನ ಮೇಲು ಕೇಸ್ ಹಾಕಿದ್ದಾರೆ. ಅದು ನಮ್ಮ ಜಮೀನು, ನಮ್ಮ ತಂದೆ ಮೈಲಾರಯ್ಯ ಸೇರಿದ ಜಮೀನು. ನಮಗೆ ಮೋಸ ಮಾಡಿ ಮಾರಾಟ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಸರೆ ಗ್ರಾಮದ ಜಮೀನಿನಲ್ಲಿ ನಮಗೂ ಪಾಲಿದೆ- ಮೈಲಾರಯ್ಯ ಮಗಳು ಜಮುನಾ

ಈ ಕುರಿತು ಮಾತನಾಡಿರುವ ಮೈಲಾರಯ್ಯ ಮಗಳು ಜಮುನಾ,  ನಮ್ಮ ಗಮನಕ್ಕೆ ಬಾರದೆ ಜಮೀನು ಮಾರಾಟ ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ 464 3.16 ಗುಂಟೆ ಜಮೀನಲ್ಲಿ ನಮಗೂ ಪಾಲಿದೆ. ನಮ್ಮ ಚಿಕ್ಕಪ್ಪ  ದೇವರಾಜು ಆಸ್ತಿ ಮಾರಾಟದ ವೇಳೆ ನಮಗೆ ಹೇಳಿಲ್ಲ. ಆಸ್ತಿಯಲ್ಲಿ ನಮಗೂ ಪಾಲಿದೆ. ನಮ್ಮ ಯಾರ ಗಮನಕ್ಕೂ ಬಾರದೆ ಆಸ್ತಿ ಮಾರಿದ್ದಾರೆ. ಆ ಸಮಯದಲ್ಲಿ ನಮ್ಮ ಸಹಿಯನ್ನು ಕೂಡ ತೆಗೆದುಕೊಂಡಿಲ್ಲ. ನಮಗೆ ಮೋಸ ಆಗಿದೆ. ನಮ್ಮ ಚಿಕ್ಕಪ್ಪ ದೇವರಾಜು ಏನು ಹೇಳಿಲ್ಲ . ಈಗ ಆಸ್ತಿಯಲ್ಲಿ ನಮಗೂ ಸಮಪಾಲು ಕೇಳಿ ಕೇಸ್ ಹಾಕಿದ್ದೇನೆ ಎಂದಿದ್ದಾರೆ.

Key words: muda case, Sale, land, Mailaraiah,  children, court