ಕೇಂದ್ರದ ನಾಯಕರಿಗೆ ಸೆಡ್ಡು ಹೊಡೆಯಲು ಸಿಎಂ ಸ್ವಾಭಿಮಾನಿ ಸಮಾವೇಶ- ಶಾಸಕ ಶ್ರೀವತ್ಸ ಟೀಕೆ

ಮೈಸೂರು,ನವೆಂಬರ್,29,2024 (www.justkannada.in):  ಹಾಸನದಲ್ಲಿ ಸ್ವಾಭಿಮಾನಿ ಸಿಎಂ ಸಿದ್ದರಾಮಯ್ಯ  ಸಮಾವೇಶ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶ್ರೀವತ್ಸ, ಸಿದ್ದರಾಮಯ್ಯ ಅವರು ಉಪ ಚುನಾವಣೆ ಗೆದ್ದ ಬಳಿಕ ಹುಮ್ಮಸ್ಸು ಇಮ್ಮಡಿಯಾಗಿದೆ. ಕೇಂದ್ರದ ನಾಯಕರಿಗೆ ನಾನು ಎಷ್ಟು ಪ್ರಭಾವಿ ಎಂದು ಸೆಡ್ಡು ಹೊಡೆಯಲು ಸಮಾವೇಶ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಪರದಾಡುತ್ತಿದ್ದಾರೆ. ಅದಕ್ಕಾಗಿಯೇ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆಗೆ ಇಳಿದಿದೆ. ಜನರಿಗೆ ವಿಪಕ್ಷವಾಗಿ ನಾವು ಸರ್ಕಾರದ ನಡೆಯನ್ನ ತಿಳಿಸುವಲ್ಲಿ ನಾವು ಎಲ್ಲೋ ಒಂದು ಕಡೆ ವಿಫಲವಾದೆವಾ ಎನಿಸುತ್ತದೆ ಎಂದರು.

ಡಿ.3ರಂದು ಕೋರ್ ಕಮಿಟಿ ಸಭೆ: ಅಧಿವೇಶನ, ಅಂತರಿಕ ಭಿನ್ನಾಭಿಪ್ರಾಯ ಕುರಿತು ಚರ್ಚೆ ಸಾಧ್ಯತೆ-

ಡಿ.3 ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಂಬರುವ ಚಳಿಗಾಲದ ಅಧಿವೇಶನ ಕುರಿತು ಚರ್ಚೆ ಆಗುವುದರ ಜೊತೆಗೆ ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನೂ ಕುರಿತು ಚರ್ಚೆ ಮಾಡುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ನಾಯಕರು ಮಧ್ಯಸ್ಥಿಕೆ ವಹಿಸಿ ನಮ್ಮ ನಾಯಕರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನ ಶಮನ ಮಾಡಲಿದ್ದಾರೆ. ಮುಂದೆ ಎಲ್ಲರೂ ಒಟ್ಟಾಗಿ ಹೋಗುವ ನಿರ್ದೇಶನವನ್ನ ನಮ್ಮ ನಾಯಕರು ಕೊಡಲಿದ್ದಾರೆ. ಇವರ ಆಂತರಿಕ ಕಚ್ಚಾಟವೂ ಕೂಡ ಉಪ ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಮುಂದೆ ಹೀಗೆ ಆಗದಂತೆ ನಮ್ಮ ನಾಯಕರು ಶಿಸ್ತು ಕ್ರಮ ಜರುಗಿಸುವ ಭರವಸೆ ಇದೆ ಎಂದರು.

ಬಿಎಸ್ ಯಡಿಯೂರಪ್ಪಗೆ ಪ್ರಾಸಿಕ್ಯೂಸನ್ ಜಾರಿಗೆ ಸರ್ಕಾರ ಒತ್ತಾಯ ವಿಚಾರ. ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ. ಇವರ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ಇದೆ. ಅದರ ಬಗ್ಗೆಯೂ ತನಿಖೆ ಮಾಡಲಿ. ವಾಲ್ಮೀಕಿ ಹಗರಣ,ಮುಡಾ ಹಗರಣ, ಅಬಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ತೊಡಗಿದೆ. ಅದನ್ನ ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

Key words: CM Swabhimani Conference, MLA Srivatsa, criticizes