ಮುಡಾ ವಕೀಲರ ಪೇನಲ್ ವೃಂದಕ್ಕೆ ವಕೀಲರ ನೇಮಕಕ್ಕೆ ಉಪಸಮಿತಿ ರಚನೆ

ಮೈಸೂರು,ನವೆಂಬರ್,29,2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಕೀಲರ ಪೇನಲ್ ವೃಂದಕ್ಕೆ ವಕೀಲರುಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಉಪ ಸಮಿತಿಯನ್ನು ರಚನೆ ಮಾಡಲಾಗಿದೆ

ದಿನಾಂಕ:07.11.2024 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ “ಉಪ ಸಮಿತಿ” ರಚನೆ ಮಾಡಿ, ಸದರಿ “ಉಪ ಸಮಿತಿ”ಯು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಕೀಲರ ಪೇನಲ್ ವೃಂದಕ್ಕೆ ವಕೀಲರುಗಳನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಹಾಗೂ ಪೇನಲ್ ವಕೀಲರ ಗೌರವಧನ ಕುರಿತು ಶಿಫಾರಸ್ಸುಗಳನ್ನು ಕೈಗೊಂಡು, ಪ್ರಾಧಿಕಾರದ ಸಭೆಯ ಅನುಮೋದನೆಗೆ ಮಂಡಿಸಲು ತೀರ್ಮಾನಿಸಲಾಗಿದೆ. ಅದರಂತೆ ಈ ಕೆಳಕಂಡವರುಳನ್ನು ಒಳಗೊಂಡಂತೆ “ಉಪ ಸಮಿತಿ” ಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಡಾ ಆಯುಕ್ತರು ತಿಳಿಸಿದ್ದಾರೆ.

1.ಉಪಸಮಿತಿ ಅಧ್ಯಕ್ಷರಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು.

ಈ ಕೆಳಕಂಡವರು ಉಪಸಮಿತಿ ಸದಸ್ಯರಾಗಿದ್ದಾರೆ

  1. ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್,
  2. ನಂಜನಗೂಡು ಶಾಸಕ ದರ್ಶನ್ ದ್ರುವನಾರಾಯಣ್ ,

4.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು

  1. ಮುಡಾ ಕಾನೂನು ಅಧಿಕಾರಿಗಳಾದ ಆರ್.ಚಂದ್ರಶೇಖರ್ (ನಿವೃತ್ತ ಜಿಲ್ಲಾ ನ್ಯಾಯಾಧೀಶರು) 

Key words: Sub-committee, lawyers, Muda,  panel of lawyers