ಮೈಸೂರು,ಡಿಸೆಂಬರ್,3,2024 (www.justkannada.in): ಡಿಸೆಂಬರ್ 5 ರಂದು ಹಾಸನದಲ್ಲಿ ಜನಕಲ್ಯಾಣ ಹಾಗೂ ಸ್ವಾಭಿಮಾನಿ ಸಮಾವೇಶ ಆಯೋಜನೆ ಮಾಡಲಾಗಿದೆ.ಸಮಾವೇಶಕ್ಕೆ 3 ಲಕ್ಷ ಜನ ಸೇರಲಿದ್ದು, ಮೈಸೂರು ನಗರ ಮತ್ತು ಜಿಲ್ಲೆಯಿಂದ 1300 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾಹಿತಿ ನೀಡಿದರು.
ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರರ್ಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಬಿಜೆಪಿ ಜೆಡಿಎಸ್ ನವರು ಯಾಕೆ ಸಮಾವೇಶ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸ್ವಾಭಿಮಾನಿ ಸಮಾವೇಶಕ್ಕೆ ಜನಕಲ್ಯಾಣ ಹಾಗೂ ಸ್ವಾಭಿಮಾನಿಗಳ ಸಮಾವೇಶ ಎಂದು ಕರೆಯಲಾಗಿದೆ. ಮೂರು ಲಕ್ಷ ಜನ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲೆಯಿಂದ 1300 ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಸನದ ಏಳು ತಾಲ್ಲೂಕಿನ ಜನತೆ ಐದಾರು ತಿಂಗಳಿನಿಂದ ದುಃಖದಲ್ಲಿದ್ದಾರೆ ಅವರಿಗೆ ಧೈರ್ಯ ತುಂಬುವ ಕೆಲಸ ಆಗುತ್ತದೆ. ಮಾಜಿ ಪಿಎಂ ಮೊಮ್ಮಗನೇ ಆಗಿದರೂ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶ ಕೊಡುತ್ತೇವೆ. ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಹೆಣ್ಣು ಮಕ್ಕಳ ಜೊತೆ ಗಂಡು ಮಕ್ಕಳು ಇದ್ದಾರೆ ಎಂದರು.
ಮೈತ್ರಿ ಪಕ್ಷಗಳಿಗೆ ಸಮಾವೇಶದಲ್ಲಿ ತಕ್ಕ ಉತ್ತರ ಕೊಡುತ್ತಾರೆ
ಸರ್ಕಾರ ಹಾಗೂ ಸಿಎಂ ಕೆಟ್ಟ ಹೆಸರು ತರಲು ಮುಂದಾಗಿರುವ ಬಿಜೆಪಿ, ಜೆಡಿಎಸ್ ನಾಯಕರಿಗೆ ಸಮಾವೇಶದಲ್ಲಿ ಸಿಎಂ, ಡಿಸಿಎಂ ಉತ್ತರ ಕೊಡುತ್ತಾರೆ. ನಮ್ಮ ಆಡಳಿತ ವ್ಯವಸ್ಥೆಗೆ ಅಡಚಣೆ ಮಾಡುತ್ತಿರುವ ಬಗ್ಗೆ ಜನತಾ ನ್ಯಾಯಾಲಯಕ್ಕೆ ಹೋಗುತ್ತಿದ್ದೇವೆ. ಕೇಂದ್ರ ಸರ್ಕಾರದ ಅನುದಾನ ಕಡಿತ ಮಾಡಿರುವ ಬಗ್ಗೆ ತಿಳಿಸುವ ಸಮಾವೇಶ ಇದಾಗಲಿದೆ. ರಾಜ್ಯದಲ್ಲಿ ಕೋಮುವಾದ ಸೃಷ್ಟಿಸಿ ಸಮುದಾಯದ ನಡುವೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರ ಬಗ್ಗೆ ತಿಳಿಸಿಕೊಡುತ್ತೇವೆ. ಸರ್ಕಾರ ಅಸ್ಥಿರಗೊಳಿಸಲು, ಇಡಿ ಐಟಿ, ಐಎನ್ ಐ, ಸಿಬಿಎ ಗಳನ್ನ ದುರ್ಬಳಕೆ ಮಾಡಿಕೊಂಡು ಕಳೆದ ಮೂರು ತಿಂಗಳಿನಿಂದಲೂ ತನಿಖೆ ಮಾಡುತ್ತಿದ್ದಾರೆ ಎಂದರು.
ಗನ್ ಪಾಯಿಂಟ್ ಇಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದೀರಿ ಇದರಲ್ಲಿ ಯಶಸ್ವಿ ಆಗಲ್ಲ.
ಸಿಎಂ ಸಿದ್ದರಾಮಯ್ಯರನ್ನ ಸಿಲುಕಿಸಲು ಪ್ರಯತ್ನ ಮಾಡುತ್ತಿದ್ದೀರಾ. ಯಾವ ಮಾಹಿತಿ ಕಲೆ ಹಾಕಿದ್ದೀರಾ, ಏನು ತಪ್ಪಾಗಿದೆ ಎಂಬುದನ್ನ ತನಿಖಾ ಸಂಸ್ಥೆಗಳು ತಿಳಿಸಲಿ. ಗನ್ ಪಾಯಿಂಟ್ ಇಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದೀರಿ ಇದರಲ್ಲಿ ಯಶಸ್ವಿ ಆಗಲ್ಲ. ಪೋಕ್ಸೋ ಕೇಸ್ ಗೆ ಬೇಲ್ ಸಿಗಲ್ಲ. ಯಡಿಯೂರಪ್ಪನವರಿಗೆ ಪೋಕ್ಸೋ ಕೇಸ್ ನಲ್ಲಿ ಬೇಲ್ ಸಿಕ್ಕಿದೆ. ಈ ವಿಚಾರಗಳ ಬಗ್ಗೆ ಸಮಾವೇಶ ನಡೆಯಲಿದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಬಿಜೆಪಿ ಜೊತೆಯಲ್ಲಿ ಯಾವ ನಾಯಕರು ಇದ್ದಾರೆ ಎಂಬುದನ್ನ ತಿಳಿಸಿ. ಯತ್ನಾಳ್ ರವರು ದಿನನಿತ್ಯ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. 420 ತಕೊಂಡು ಬಂದು ರಾಜ್ಯಾಧ್ಯಕ್ಷರಾಗಿ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಸಮಾವೇಶ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಟೀಕಿಸಿದರು.
ಚನ್ನಪಟ್ಟಣ ಬೈ ಎಲೆಕ್ಷನ್ ಬಳಿಕ ಮಣ್ಣಿನ ಮಕ್ಕಳು ಕಾಣೆ
ತಮಿಳುನಾಡಿನಲ್ಲಿ ಫೆಂಗಲ್ ನಿಂದ ಜನ ತತ್ತರಿಸಿದ್ದಾರೆ. ಕೇಂದ್ರ ಸರ್ಕಾರ ತಮಿಳುನಾಡಿಗೆ ಭೇಟಿ ಕೊಟ್ಟಿಲ್ಲ. ಜನರ ಸಮಸ್ಯೆ ಆಲಿಸುವ ಕೆಲಸ ಮಾಡಿ. ಚನ್ನಪಟ್ಟಣ ಬೈ ಎಲೆಕ್ಷನ್ ಬಳಿಕ ಮಣ್ಣಿನ ಮಕ್ಕಳು ಕಾಣೆಯಾಗಿದ್ದಾರೆ. ಸೋಲು ಏನೇ ಇರಲಿ ಮೊದಲು ಜನರ ಬಳಿಗೆ ತೆರಳಿ ಎಂದು ಸಲಹೆ ನೀಡಿದರು.
ಮೈಸೂರು ಚಾಮರಾಜನಗರ ಭಾಗದಲ್ಲಿ ಒಬ್ಬ ಬಿಜೆಪಿ ಶಾಸಕ ಆಯ್ಕೆ ಆಗಿದ್ದಾರೆ. ಶಾಸಕ ಶ್ರೀವತ್ಸ ಮಾಧ್ಯಮಗಳ ಮುಂದೆ ಬಾಯಿ ಬಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ರ್ವಸೆ 153 ರಲ್ಲಿ 2 ಎಕರೆ 25 ವರ್ಷದ ಹಿಂದೆಯೇ ಒತ್ತುವರಿ ಯಾಗಿದೆ.
ಅಲ್ಲಿನ ಜನತೆಗೆ ನೋಟಿಸ್ ನೀಡಿದ್ದೆ ಯಡಿಯೂರಪ್ಪ ಸಿಎಂ ಆಗಿದ್ದಾಗ. ವಖ್ಫ್ ಆಸ್ತಿ ಒತ್ತುವರಿಯಾಗಿರೋದು ನಿಜ ಅಂತ ಬಂದ ಮೇಲೆ ಆ ಜಾಗವನ್ನ ರಿಕವರಿ ಮಾಡಲು ಅಂದಿನ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ಆ ಪತ್ರವನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ರಿಕವರಿ ಮಾಡಲಿಕ್ಕೆ ನೋಟಿಸ್ ಕೊಟ್ಟಿದ್ದು ಯಾರು ಎಂಬುದನ್ನ ಶ್ರೀವತ್ಸ ಹೇಳಲಿ. ನೀವೇನೇ ಸುಳ್ಳು ಹೇಳಿದ್ರು ನಾವು ಸತ್ಯ ಹೇಳೇ ಹೇಳ್ತೇವೆ ಎಂದರು.
ಮೈಸೂರಿನ ಜ್ಞಾನಗಂಗಾ ಗೃಹನಿರ್ಮಾಣ ಸಹಕಾರ ಸಂಘದ ಮೇಲೆ ಆರೋಪ ಮಾಡಿದ್ದೀರಾ. ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೀರಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್. ಇದು ಖಾಸಗಿ ಲೇ ಔಟ್ ಗಳು. ಐದು ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡಿದ್ದೀರಾ. ಐದು ಸಾವಿರ ಕೋಟಿ ಹಗರಣ ಬಗ್ಗೆ ದಾಖಲೆ ಕೊಡಲಿ ಎಂದು ಶಾಸಕ ಶ್ರೀವತ್ಸ ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಸವಾಲು ಹಾಕಿದರು.
ಶಾಸಕ ಬಸನಗೌಡ ಯತ್ನಾಳ್ ಕಾಂಗ್ರೆಸ್ ಗೆ ಸೆಳೆಯುವ ವಿಚಾರ. ಯತ್ನಾಳ್ ಬಿಜೆಪಿಯಲ್ಲೇ ಇರಲಿ ಎಂಬುದು ನನ್ನ ವೈಯಕ್ತಿಕ ಹೇಳಿಕೆ. ಬಿಜೆಪಿಯಲ್ಲಿದ್ದು ಅವರ ಅಧ್ಯಕ್ಷರನ್ನೇ ಬೈಯುವ ಕೆಲಸ ಮಾಡುತ್ತಿದ್ದಾರೆ. ಇದೇ ಚಾಳಿ ನಮ್ಮ ಪಕ್ಷಕ್ಕೆ ಬಂದಾಗಲು ಮಾಡಿದ್ರೆ ಕಷ್ಟ ಆಗುತ್ತದೆ. ಯತ್ನಾಳ್ ಕಾಂಗ್ರೆಸ್ ವಿರುದ್ಧ ಸಾಕಷ್ಟು ಹೇಳಿಕೆ ನೀಡಿದ್ದಾರೆ. ಸಿಎಂ, ಡಿಸಿಎಂ ಬಗ್ಗೆ ಎಲ್ಲಾ ವಾಗ್ದಾಳಿ ಮಾಡಿದ್ದಾರೆ. ಇಂತಹವರು ನಮ್ಮ ಪಕ್ಷಕ್ಕೆ ಬರುತ್ತಾರಾ. ಅವರು ಬರೋದು ಇಲ್ಲ ಬರೋದು ಬೇಡ ಎಂದು ಲಕ್ಷ್ಮಣ್ ತಿಳಿಸಿದರು.
key words: 3 lakh, people, Janakalyana Samavesha, M. Laxman