ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು,ಡಿಸೆಂಬರ್,3,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್  ಡಿಸೆಂಬರ್ 6ಕ್ಕೆ ಮುಂದೂಡಿಕೆ ಮಾಡಿದೆ.

ಇಂದು ಹೈಕೋರ್ಟ್ ನ ನ್ಯಾ ವಿಶ್ವಜೀತ್ ಶೆಟ್ಟಿ ಪೀಠದಲ್ಲಿ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ, ಎಲ್ಲಾ ಆರೋಪಿಗಳ ಅರೆಸ್ಟ್ ಮೆಮೋದ ಕಾಪಿ ನೀಡಲು ಆರೋಪಿಗಳ ಪರ ವಕೀಲರಿಗೆ ಜಡ್ಜ್ ವಿಶ್ವಜೀತ್ ಶೆಟ್ಟಿ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ಡಿಸೆಂಬರ್ 6 ರಂದು ಮುಂದೂಡಿಕೆ ಮಾಡಿದರು.

ಹಾಗೆಯೇ ಡಿಸೆಂಬರ್ 6 ರಂದು ಪೊಲೀಸರ ಪರ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡುವಂತೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಪವಿತ್ರ ಗೌಡ ಅವರ ಪರ ವಾದ ಮಂಡಿಸಿದ ವಕೀಲ ಟಾಮಿ ಸೆನಾಸ್ಟಿಯನ್ , ಪ್ರಕರಣ ಸಂಬಂಧ ಮೊದಲು ನಟ ದರ್ಶನ್ ರೇಣುಕಾ ಸ್ವಾಮಿಗೆ ಹೊಡೆದ ಆರೋಪವಿದೆ. ನಂತರ ಪವಿತ್ರ ಗೌಡ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿದ್ದಾರೆ. ಬಳಿಕ ಪವಿತ್ರ ಗೌಡರನ್ನು ಮನೆಗೆ ಬಿಟ್ಟು ಬಂದರೆಂದು ಹೇಳಿಕೆ ಇದೆ. ಆರೋಪ ಪಟ್ಟಿಯಲ್ಲಿ ಇವೆಲ್ಲವನ್ನೂ ಉಲ್ಲೇಖಿಸಲಾಗಿದೆ.

ಕೇವಲ ಒಂದು ಬಾರಿ ಮಾತ್ರ ಪವಿತ್ರಾ ಗೌಡ ಹೊಡೆದಿದ್ದಾರೆ. ನಂತರ ಮನೆಗೆ ಬಿಡಲಾಯಿತೆಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಗೌಡ ಮಹಿಳೆಯಾಗಿದ್ದು,  ಅಪರಾಧದ ಹಿನ್ನೆಲೆಯಿಲ್ಲ. ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಿದ ಉದಾಹರಣೆಗಳಿವೆ. ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರ ಗೌಡಗೆ 9ನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ ಹೀಗಾಗಿ ಜಾಮೀನು ನೀಡುವಂತೆ ವಕೀಲರು ಕೋರ್ಟ್ ನಲ್ಲಿ ಮನವಿ ಮಾಡಿದರು.

Key words: Renukaswamy , murder case, Pavitra Gowda, bail, High court