ಯತ್ನಾಳ್ ಮಾತು ಕೇಳದಿದ್ರೆ ಕ್ರಮ ಆಗಲೇಬೇಕು- ಮಾಜಿ ಸಚಿವ ಅರಗ ಜ್ಞಾನೇಂದ್ರ ಆಗ್ರಹ

ಬೆಂಗಳೂರು,ಡಿಸೆಂಬರ್,3,2024 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಡುತ್ತಲೇ ಇರುವ ಹಿನ್ನೆಲೆ ಬಿಎಸ್ ವೈ ಬಣದ ಮುಖಂಡರು ಯತ್ನಾಳ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಅರಗ ಜ್ಞಾನೇಂದ್ರ,   ಸಭೆಯಲ್ಲಿ ಚರ್ಚೆಯಾಗಿದೆ.  ಹೈಕಮಾಂಡ್  ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ವಿಷಯ ಮುಟ್ಟಿಸುತ್ತಾರೆ. ಅವಮಾನಗಳನ್ನ ಸಹಿಸಿ ಬಿಎಸ್ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ. ಆದರೆ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನ ಟೀಕಿಸಿದರೇ ಹೇಗೆ ಎಂದು ಯತ್ನಾಳ್ ಟೀಮ್ ವಿರುದ್ದ ಕಿಡಿಕಾರಿದರು.

ಹಾಗೆಯೇ ಕೆಲವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಯತ್ನಾಳ ಮಾತು ಕೇಳದಿದ್ದರೇ ಕ್ರಮ ಆಗಲೇಬೇಕು. ನಮ್ಮ ಹೈಕಮಾಂಡ್ ಗಟ್ಟಿಯಿದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

Key words: action, Against, Yatnal, Former Minister, Araga Jnanendra