ಬಾಣಂತಿಯರ ಸರಣಿ ಸಾವು ಕೇಸ್ ನಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ದ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಡಿಸೆಂಬರ್,6,2024 (www.justkannada.in): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ನನ್ನ ತಪ್ಪಿದ್ದರೇ ರಾಜೀನಾಮೆ ಕೊಡಲು ಸಿದ್ದ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿ ಸುಮಯಾ ಬಾನು ನಿನ್ನೆ ಸಾವನ್ನಪ್ಪಿದ್ದು  ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ದ.  ಬಿಜೆಪಿಯವರು ಖಂಡಿತ ದೂರು ಕೊಡಲಿ ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ಇದು ಜೀವದ ವಿಚಾರ. ರಾಜೀನಾಮೆಯಿಂದ ಸರಿಯಾಗುತ್ತೆ ಅಂದರೆ ರಾಜೀನಾಮೆಗೆ ಸಿದ್ದ ಆದರೆ ಈ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ ಪ್ರಕರಣದಲ್ಲಿ ವಿಪಕ್ಷಗಳ ಸಹಕಾರವೂ ಬೇಕು . ಬ್ಯಾನ್ ಮಾಡಿದ ಮೇಲೂ ಅದೇ ಔಷಧಿ ಸರಬರಾಜಾಗಿದೆ. 9 ಜನರಿಗೆ ಸಮಸ್ಯೆ ಆಗಿತ್ತು ನಾಲ್ವರು ಮೃತಪಟ್ಟಿದ್ದರು  ಚಿಕಿತ್ಸೆ ಪಡೆಯುತಿದ್ದ ಬಾಣಂತಿ ನಿನ್ನೆ ಸಾವನ್ನಪ್ಪಿದ್ದಾರೆ. ಎಲ್ಲಿ ನಿರ್ಲಕ್ಯ ಆಗಿದೆ ಎಂಬುದನ್ನ ತನಿಖೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Key words: Minister, Dinesh GunduRao, Ballari Hospital, serial death