ಚಾಮರಾಜನಗರ,ಡಿಸೆಂಬರ್,6,2024 (www.justkannada.in) ಕಾಡಿನಲ್ಲಿರಬೇಕಾದ ಕಾಡಾನೆಗಳು ಇದೀಗ ನಾಡಿಗೆ ಬರತೊಡಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳು ಸಂಚಾರ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಡಾ. ರಾಜ್ ಕುಮಾರ್ ರಸ್ತೆ ವೃತ್ತದಲ್ಲಿ ಎರಡು ಕಾಡಾನೆಗಳು ರಾಜ ಗಂಭೀರ್ಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಸ್ತೆಯಲ್ಲಿ ನಡೆದ ಬಂದ ಕಾಡಾನೆಗಳು ಪೆಟ್ರೋಲ್ ಬಂಕ್ ಒಳಗೆ ಬಂದು ಸುತ್ತಾಡಿ ಮತ್ತೇ ರಸ್ತೆಗೆ ತೆರಳಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಮುಂಜಾನೆ ಸುಮಾರು ಒಂದೂವರೆ ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಆನೆ ಬರುವುದನ್ನು ಕಂಡ ಪೆಟ್ರೋಲ್ ಬಂಕ್ ನ ಸಿಬ್ಬಂದಿಯೊಬ್ಬರು ಹೆದರಿ ಅಲ್ಲಿಂದ ಕಾಲ್ಕಿತ್ತರು ಬಳಿಕ ಕಾಡಾನೆ ಬಂದು ಹೋಗಿದೆ. ಇದೀಗ ಕಾಡಾನೆ ಸೆರೆಗೆ ಅರಣ್ಯ ಇಲಾಖೆಯವರು ಹುಡುಕಾಟ ನಡೆಸುತ್ತಿದ್ದಾರೆ.
Key words: Wild elephants, Kollegal , CCTV