ಮೈಸೂರು ಮಹಾನಗರ ಪಾಲಿಕೆಯ ಪೀಠೋಪಕರಣಗಳು ಜಪ್ತಿ

ಮೈಸೂರು,ಡಿಸೆಂಬರ್,6,2024 (www.justkannada.in): ಕುಡಿಯುವ ನೀರು ಘಟಕ  ಸ್ಥಾಪಿಸಲು ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆಯ ಪೀಠೋಪಕರಣಗಳನ್ನ ಇಂದು ಜಪ್ತಿ ಮಾಡಲಾಗಿದೆ.

1994 ರಲ್ಲಿ ರಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಘಟಕ  ಸ್ಥಾಪಿಸಲು ವಿವಿಧ ಸರ್ವೆ ನಂಬರ್ ನ  ಸುಮಾರು 45 ಎಕರೆ ಜಮೀನುಗಳನ್ನು ಪಾಲಿಕೆ ಭೂ ಸ್ವಾಧೀನಪಡಿಸಿಕೊಂಡಿತ್ತು.  ಒಂದು ಎಕರೆಗೆ 45 ಸಾವಿರದಂತೆ ಪರಿಹಾರ ಕೊಡಲು ಮಹಾ ನಗರ ಪಾಲಿಕೆ ಒಪ್ಪಿತ್ತು.

ಈ ಮಧ್ಯೆ ಹೆಚ್ಚಿನ‌ ಪರಿಹಾರಕ್ಕಾಗಿ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್  ಸಂತ್ರಸ್ತರಿಗೆ  ಹೆಚ್ಚಿನ ಪರಿಹಾರ ಕೊಡಲು ಆದೇಶ ಹೊರಡಿಸಿತ್ತು. 2021 ರಲ್ಲೇ ಹೆಚ್ಚಿನ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಕೊಟ್ಟಿತ್ತು.  ಆದರೆ ಪರಿಹಾರ ನೀಡಲು ಮಹಾನಗರ ಪಾಲಿಕೆ ವಿಳಂಬ ಮಾಡಿದ್ದು, ನ್ಯಾಯಾಲಯದ ಆದೇಶ ಪಾಲಿಸಿರಲಿಲ್ಲ.ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡಲು ವಿಳಂಬ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಪಾಲಿಕೆಯಚರ ಮಾಲುಗಳ ಜಪ್ತಿ ಮಾಡಲು  ಕೋರ್ಟ್ ಆದೇಶ ಹೊರಡಿಸಿದ್ದು ಕೋರ್ಟ್ ಅಮೀನರು, ವಕೀಲರ ಸಮ್ಮುಖದಲ್ಲಿ ಪಾಲಿಕೆ ಪಿಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ. ಎಲ್ಲಾ ಪೀಠೋಪಕರಣಗಳು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡುತ್ತಿದ್ದಾರೆ.

Key words: Mysore City Corporation, furniture, seized, court