ಬೆಂಗಳೂರು,ಡಿಸೆಂಬರ್,6,2024 (www.justkannada.in): ಖನಿಜಗಳನ್ನಹೊಂದಿರುವ ಭೂಮಿಗೆ ತೆರಿಗೆಯನ್ನ ಹಾಕಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಯಾವುದೇ ಖನಿಜಗಳನ್ನ ಹೊಂದಿರಬಹುದು, ಅಂತಹ ಭೂಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ ಬಾಕ್ಸೈಟ್,ಕ್ರೋಮ್ ಇನ್ನಿತರ ಖನಿಜ ಇರುವ ಭೂಮಿಗೆ ತೆರಿಗೆ ವಿಧಿಸಲಾಗುವುದು. ಒಂದು ಟನ್ ಗೆ 100 ರೂ.ನಂತೆ ರಾಯಲ್ಟಿ ಹಾಕುವುದು. ಈ ಟ್ಯಾಕ್ಸ್ ಅನ್ನ ಭೂ ಮಾಲೀಕರು ಕಟ್ಟಬೇಕಿದೆ. ಆ ಖನಿಜದ ಹಕ್ಕುಗಳು ಭೂಮಾಲೀಕನಿಗೆ ಸೇರುತ್ತದೆ ಎಂದರು.
ಸರ್ಕಾರದ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ಯಾರೆಂಟಿಗಳಿಗೇನು ಹಣದ ಕೊರತೆಯಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಆಗಬೇಕಲ್ಲ ಹಾಗಾಗಿ ರಾಯಲ್ಟಿ, ತೆರಿಗೆ ಹಾಕಲಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಬಳ್ಳಾರಿ ಮತ್ತೋರ್ವ ಬಾಣಂತಿ ಸಾವು ಪ್ರಕರಣ ಸಂಬಂಧ, ಬಳ್ಳಾರಿ ಪ್ರಕರಣದ ಬಗ್ಗೆ ಚರ್ಚೆಯಾಗಿದೆ. ಪ್ರಕರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ದಿನೇಶ್ ಗುಂಡೂರಾವ್ ಕೆಲವು ಮಾಹಿತಿ ಕೊಟ್ಟಿದ್ದಾರೆ. ಘಟನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೊಟ್ಟಿದ್ದಾರೆ. ಬಹಳ ಜಾಗರೂಕರಾಗಿರಬೇಕೆಂದು ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
Key words: Government, tax, land, containing, minerals