ಭೀಕರ ಅಪಘಾತ:  ಐವರು ದುರ್ಮರಣ

ವಿಜಯಪುರ,ಡಿಸೆಂಬರ್,6,2024 (www.justkannada.in): ಕಾರು ಮತ್ತು ಕಬ್ಬು ಕಟಾವು ಮಷಿನ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಬಿಳೆಬಾವಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮೃತರು ವಿಜಯಪುರ ಜಿಲ್ಲೆ ಅಲಿಯಾಬಾದ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಮಹಿಳೆಯರು ಮೂವರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಕಾರಿಗೆ ಕಬ್ಬು ಕಟಾವು ಮಷಿನ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ತಾಳಿಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Vijaypur, accident, Five, dead