ಬೆಂಗಳೂರು ,ಡಿಸೆಂಬರ್,7,2024 (www.justkannada.in): ಕೋವಿಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾ.ಕುನ್ಹಾ ಮಧ್ಯಂತರ ವರದಿ ಪರಿಶೀಲನೆ ಮಾಡಿದ್ದೇವೆ. ವರದಿ ಆಧಾರದ ಮೇಲೆ ತನಿಖೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ, ನ್ಯಾ.ಕುನ್ಹಾ ವರದಿ ಕುರಿತು ಇಂದು ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಭೆಯಲ್ಲಿ ನ್ಯಾ.ಕುನ್ಹಾ ಮಧ್ಯಂತರ ವರದಿ ಪರಿಶೀಲನೆ ಮಾಡಿದ್ದೇವೆ. ವರದಿ ಶಿಫಾರಸಿನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಫ್‌ಐಆರ್ ಸೇರಿದಂತೆ ಪ್ರತಿಯೊಂದು ವಿಚಾರಣೆ ಮಾಡಬಹುದು. ಹಿಂದೆ ಚಾಮರಾಜನಗರಕ್ಕೂ ನಾನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದೆವು ಮುಂದೆ ಬೆಳಗಾವಿಯಲ್ಲಿ ಸಂಪುಟ ಸಮಿತಿ ಸಭೆ ಮಾಡುತ್ತೇವೆ ಎಂದರು.
ಬೆಂಗಳೂರಿನಲ್ಲಿ 84 ಲಕ್ಷ ಆರ್ ಟಿಪಿಸಿಆರ್ ಟೆಸ್ಟ್ ಮಾಡಿದ್ದಾರೆ. 84 ಲಕ್ಷ ಆರ್ ಟಿಪಿಸಿಆರ್ ಟೆಸ್ಟ್ ಗೆ 500 ಕೋಟಿ ರೂಪಾಯಿ ಆಗಿದೆ. ಈ ಸಂಬಂಧ 400 ಕೋಟಿ ಹಣ ಪಾವತಿ ಮಾಡಿದ್ದಾರೆ. ಅಧಿಕಾರಿಗಳೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾರೆಲ್ಲ ಸಹಿ ಮತ್ತು ಆದೇಶ ಕೊಟ್ಟಿದ್ದಾರೋ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನುಬಾಹಿರವಾಗಿ ಏನೇನೋ ಆಗಿದೆಯೋ ಎಲ್ಲವನ್ನೂ ಪರಿಶೀಲನೆ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Covid scam, Investigation, report, DCM DK Shivakumar