ಮೈಸೂರು,ಡಿಸೆಂಬರ್,7,2024 (www.justkannada.in): ಪ್ರವಾಸಕ್ಕೆ ಬಂದಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿ ಬಸ್ ಡೋರ್ ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ದೀನ್ ದಯಾಳ್ (21) ಮೃತ ವಿದ್ಯಾರ್ಥಿ. ಪಿರಿಯಾಪಟ್ಟಣ ತಾಲೂಕಿನ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವ ವೇಳೆ ಈ ಅವಘಡ ಸಂಭವಿಸಿದೆ. ಡೋರ್ ಲಾಕ್ ಆಗದ ಪರಿಣಾಮ ಡೋರ್ ನಿಂದ ವಿದ್ಯಾರ್ಥಿ ದೀನ್ ದಯಾಳ್ ಕೆಳಗೆ ಬಿದ್ದಿದ್ದು, ಈ ವೇಳೆ ರಸ್ತೆಯ ಪಕ್ಕದಲ್ಲಿದ್ದ ಲೈಟ್ ಕಂಬಕ್ಕೆ ತಾಗಿ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ತಡರಾತ್ರಿ ನಡೆದಿರುವ ಘಟನೆ, ಈಗ ತಡವಾಗಿ ಬೆಳಕಿಗೆ ಬಂದಿದೆ. ನಿರ್ವಾಹಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
Key words: Student, death, falling, bus