MYSORE CITY CORPORATION: ನೀರಿನ ಬಿಲ್‌ ಹಣ ಅಕ್ರಮ ಬಳಕೆ:ನೌಕರರ ವಜಾಗೊಳಿಸಿದ ಆಯುಕ್ತ ಷರೀಫ್.

MYSORE CITY CORPORATION: Commissioner Sharif sacks employees for misusing water bill money.

 

ಮೈಸೂರು, ಡಿ.೦೮,೨೦೨೪: (www.justkannada.in news) ನಗರ ಪಾಲಿಕೆ ನೀರಿನ ಬಿಲ್ ಬಾಕಿ ಹಣ ಅಕ್ರಮ ಬಳಕೆ ಮಾಡಿಕೊಂಡ ಆರೋಪದ ಮೇಲೆ ಆರು ಮಂದಿ ಕೆಲಸಗಾರರ ವಜಾ ಹಾಗೂ  15 ಮಂದಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಪಾಲಿಕೆ ಆಯುಕ್ತ ಅಸಾದ ಉರ್ ರೆಹಮಾನ್ ಷರೀಫ್ ಆದೇಶ.

ವಾಟರ್ ಇನ್ಸ್ಪೆಕ್ಟರ್ ಗಳಾದ ಚನ್ನೇಗೌಡ, ಕೆ ಮಹೇಶ್, ಎನ್ ಮೋಹನ್, ಮೀಟರ್ ರೀಡರ್ ಗಳಾದ ವೆಂಕಟೇಶ್ ಮತ್ತು ಸೈಫುಲ್ಲಾ ವಜಾಗೊಂಡ ನೌಕರರು.

ಸಾರ್ವಜನಿಕರಿಂದ ನೀರಿನ ಬಿಲ್ ಸಂಗ್ರಹಿಸಿ ಅದನ್ನು ಪಾಲಿಕೆ ಖಾತೆಗೆ ಜಮಾ ಮಾಡದೇ ಹಣ ಗುಳುಂ ಮಾಡಿದ್ದ ನೌಕರರು. ಜತೆಗೆ ಸಾರ್ವಜನಿಕರಿಗೆ ನಕಲಿ ಬಿಲ್ ರಸೀದಿ ನೀಡುತ್ತಿದ್ದ ಆರೋಪಿಗಳು. ಈ ಸಂಬಂಧ ದೂರು ಬಂದ ಹಿನ್ನೆಲೆ. ಪ್ರಕರಣ ತನಿಖೆ ನಡೆಸಿದ್ದ ಪಾಲಿಕೆ ಅಧಿಕಾರಿ ಕೆ.ಜೆ. ಸಿಂಧೂ. ಈ ತನಿಖಾ ವರದಿ ಆಧರಿಸಿ ನೌಕರರ ಮೇಲೆ ಕ್ರಮ ಕೈಗೊಂಡಿರುವ ಪಾಲಿಕೆ ಆಯುಕ್ತ ಷರೀಫ್.

ನಕಲಿ ಸಾಫ್ಟ್ ವೇರ್ ಬಳಕೆಗೆ ಸಹಾಯ ಮಾಡಿದ್ದ ಸೆಮಿನಲ್ ಸಂಸ್ಥೆ ಮಲ್ಲಿಕಾರ್ಜುನ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪಾಲಿಕೆ ಸಿದ್ಧತೆ.

key words: MYSORE CITY CORPORATION, Commissioner Sharif, sacks, employees, misusing, water bill money.