ಮೈಸೂರು, ಡಿ.೦೯,೨೦೨೪ (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಅಕ್ರಮ ಹಂಚಿಕೆ ಹಗರಣ ವಿಚಾರ, ಮುದ್ರಾಂಕ ಶುಲ್ಕದಲ್ಲೂ ಮಹಾ ಮೋಸ. ಕೇವಲ 3 ಸಾವಿರಕ್ಕೆ ಸೈಟು ಪಡೆದಿರುವ ಆರೋಪ. ದಿನ ಪತ್ರಿಕೆಗಳಲ್ಲಿ ಪಬ್ಲಿಕ್ ನೋಟಿಸ್ ನೀಡಿ ಕ್ಲಾರೀಫಿಕೇಶನ್ ನೀಡಲು ಮುಂದಾದ ಬಿಲ್ಡರ್ ಎನ್.ಮಂಜುನಾಥ್.
ಜಿಪಿಎ ಮೂಲಕ ಸೈಟ್ ಪಡೆದಿರುವ ಮಂಜುನಾಥ್ , ಪತ್ರಿಕೆಗಳಲ್ಲಿ ನೋಟಿಸ್ ನೀಡಿ ಕ್ಲಾರೈಫಿಕೇಶನ್ , ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿ ಬೆಸ್ ಲೆಸ್ , ನಾನು ಯಾವುದೇ ಅಕ್ರಮ ಸೈಟ್ ಪಡೆದಿಲ್ಲ, ನಮ್ಮ ಭೂಮಿ ಹೋಗಿದೆ ಸೈಟ್ ಪಡೆದಿದ್ದೇನೆ ಎಂದು ಸಮಜಾಯಿಷಿ ನೀಡಿ ಪ್ರಕಟಣೆ ನೀಡಿರುವ ಬಿಲ್ಡರ್ ಎನ್.ಮಂಜುನಾಥ್.
ಕಾರ್ತಿಕ್ ಲೇ ಔಟ್ ಬಿಲ್ಡರ್ ಮಂಜುನಾಥ್ ವಿರುದ್ಧ ವಕೀಲ ರವಿಕುಮಾರ್ ಹಾಗೂ ಆರ್.ಟಿ.ಐ. ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಿಡಿ.
ಮುಡಾದಲ್ಲಿ ಮಂಜುನಾಥ್ ಅಕ್ರಮ ಎಸಗಿರುವುದು ಸತ್ಯ. ಪತ್ರಿಕೆಗಳಲ್ಲಿ ಪಬ್ಲಿಕ್ ನೋಟಿಸ್ ಹೊರಡಿಸಿದ ತಕ್ಷಣ ಸತ್ಯ ಸುಳ್ಳಾಗಲ್ಲ. ಅವರು ತಪ್ಪೇ ಎಸಗಿಲ್ಲ ಅಂತ ಪ್ರೂವ್ ಮಾಡಿದರೆ ನಾನು ವಕೀಲ ವೃತ್ತಿ ಬಿಡ್ತೀನಿ. ಅವರು ಅಕ್ರಮ ಎಸಗಿಲ್ಲ ಎಂದಾದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ. ನಾನೇ ಅವರಿಗೆ ಲಾಯರ್ ಇಟ್ಟುಕೊಟ್ಟು ಅವರ ಹಣವನ್ನೂ ಭರಿಸ್ತೀನಿ. ನ್ಯಾಯಾಲಯದ ಆದೇಶವನ್ನ ಮಂಜುನಾಥ್ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.
ಜಿಪಿಎ ಪಡೆದ ವ್ಯಕ್ತಿಗೆ ಸೈಟ್ ಕೊಡಿ ಅಂತ ಎಲ್ಲಿ ಹೇಳಿದೆ? ಭೂಮಿ ಕಳೆದುಕೊಂಡ ರೈತರಿಗೆ ಮಂಜುನಾಥ್ ಮೋಸ ಮಾಡಿದ್ದಾನೆ. ಭೂಮಿ ಕೊಡುವುದಾದರೆ ರೈತರಿಗೆ ನೀಡಬೇಕು. 3000 ರೂಗೆ ಸೈಟ್ ನೀಡಿರುವುದನ್ನ ಮುಡಾ ದಾಖಲೆಗಳೇ ಹೇಳುತ್ತಿವೆ. ಈ ಕೂಡಲೇ ಮಂಜುನಾಥ್ ಅವರನ್ನ ಬಂಧಿಸಿ ಅಗತ್ಯ ಕ್ರಮತೆಗೆದುಕೊಂಡರೆ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಮುಡಾದ ಕೋಟ್ಯಾಂತರ ರೂ ಆಸ್ತಿ ಸಂರಕ್ಷಣೆ ಆಗಲಿದೆ ಎಂದು ಒತ್ತಾಯಿಸಿದ್ದಾರೆ.
ಕಾರ್ತಿಕ್ ಲೇ ಔಟ್ ನ ಮಂಜುನಾಥ್ ಅಕ್ರಮ ಎಸಗಿದ್ದಾನೆ, ದೂರುದಾರ ಸ್ನೇಹಮಯಿಕೃಷ್ಣ ಹೇಳಿಕೆ. ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಬಂದ ವರದಿ ಸುಳ್ಳು ಅಂತಾರೆ. ಮುಡಾದವರೇ ನೀಡಿರುವ ದಾಖಲೆಗಳು ಹಾಗಾದರೆ ಸುಳ್ಳಾ? ಜಿಪಿಎ ಪಡೆದ ವ್ಯಕ್ತಿಗೆ ಸೈಟ್ ಗಳನ್ನ ಹೇಗೆ ಕೊಡ್ತಾರೆ? ಮಾಧ್ಯಮಗಳನ್ನ ಹೆದರಿಸುವ ಕೆಲಸ ಮಾಡ್ತಿದ್ದಾರೆ. ಈ ಹಿಂದೆ ದೂರುದಾರರನ್ನ ಎದುರಿಸುತ್ತಿದ್ದರು. ಅವರ ವಿರುದ್ಧ ಹೋರಾಟ ಮಾಡುವವರ ಬಾಯಿ ಮುಚ್ಚಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ತಾಕತ್ತಿದ್ದರೆ ಮಂಜುನಾಥ್ ಅಕ್ರಮ ಎಸಗಿಲ್ಲ ಅಂತ ಪ್ರೂವ್ ಮಾಡಲಿ.
key words: MUDA SCAM, “public notice”, Challenge, builder Manjunath.
MUDA SCAM: The truth does not become false as soon as a “public notice” is issued: Challenge to builder Manjunath.