ಮೈಸೂರು,ಡಿಸೆಂಬರ್,9,2024 (www.justkannada.in): ಸರ್ಕಾರಿ ಶಾಲೆಗಾಗಿ ನಾವು ನೀವು ಎಂಬ ವಾಟ್ಸಪ್ ಗ್ರೂಪಿನ ಸಹಕಾರದಿಂದ ಮಗಳ ಮದುವೆಯ ಪ್ರಯುಕ್ತ ಮೈಸೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿ ವೆಂಕಟೇಶ್ ಅವರು ಸರ್ಕಾರಿ ಶಾಲೆಗಳಿಗೆ ಮಿಕ್ಸರ್ ಗಳು, ಗ್ರೀನ್ ಬೋರ್ಡ್ ಗಳನ್ನ ವಿತರಿಸಿದರು.
ವಿ ವೆಂಕಟೇಶ್ ರವರು ಅವರ ಮಗಳ ಮದುವೆಯ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಯ ಕೆಲವು ಆಯ್ದ ಶಾಲೆಗಳಿಗೆ -ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಮೈಸೂರು ಪ್ರೌಢಶಾಲೆಗೆ, ನಂಜನಗೂಡಿನ ಬಿದರಗೋಡು ಪ್ರಾಥಮಿಕ ಶಾಲೆಗೆ, ಮೈಸೂರು ತಾಲ್ಲೂಕಿನ ಕಮರವಳ್ಳಿ, ಚಿಕ್ಕನಹಳ್ಳಿ ಪ್ರಾಥಮಿಕ ಶಾಲೆಗೆ ಬಿಸಿ ಊಟದ ತಯಾರಿಕೆಗೆ ಅನುಕೂಲವಾಗಲೆಂದು ಮಿಕ್ಸರ್ ಗಳನ್ನು ಹಾಗೆಯೇ ಮೈಸೂರು ತಾಲ್ಲೂಕಿನ ಕೋಟೆಹುಂಡಿ ಮತ್ತು ಗುಮ್ಮಚನಹಳ್ಳಿ ಸರ್ಕಾರಿ ಶಾಲೆಗೆ ಗ್ರೀನ್ ಬೋರ್ಡ್ ಗಳನ್ನು ಅವರುಗಳ ಸಂಬಂಧಿಕರ ಸಹಕಾರದಿಂದ ಸದರಿ ಶಾಲೆಯ ಶಿಕ್ಷಕರಿಗೆ ನೀಡುವುದರ ಮೂಲಕ ವಿಶೇಷವಾಗಿ ವಿನೂತನವಾದ ಸಾಮಾಜಿಕ ಬದ್ಧತೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸರ್ಕಾರಿ ಶಾಲೆಗಳ ಬಗ್ಗೆ ಅಪಾರವಾದ ಕಾಳಜಿವುಳ್ಳ ವೆಂಕಟೇಶ್ ರವರ ಮಗಳ ಶುಭ ವಿವಾಹ ಈ ಶುಭ ಸಂದರ್ಭದಲ್ಲಿ ತಾವು ಮತ್ತು ತಮ್ಮ ಸಂಬಂಧಿಕರು ಸೇರಿ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯಕ್ಕೆ ನನ್ನ ಧನ್ಯವಾದಗಳು, ಎಲ್ಲರಿಗು ಮಾದರಿಯಾದ ತಮ್ಮ ಕುಟುಂಬ ವರ್ಗಕ್ಕೆ ನನ್ನ ನಮಸ್ಕಾರಗಳು ಎಂದು ಶಾಸಕ ಜಿ.ಟಿ.ದೇವೇಗೌಡ ಶ್ಲಾಘಿಸಿದರು
Key words: V. Venkatesh, distributed, mixers, green boards to government schools