ಪ್ರಧಾನಮಂತ್ರಿ ಸೂರ್ಯ ಘರ್‌ ‌ಗೆ 5,14 ಲಕ್ಷ ನೋಂದಣಿ: ಬೆಸ್ಕಾಂ ವ್ಯವಸ್ಥಾಪಕ ಮಹಾಂತೇಶ ಬಿಳಗಿ

ಬೆಂಗಳೂರು, ಡಿಸೆಂಬರ್ ,9, 2024 (www.justkannada.in):  ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ರಾಜ್ಯಾದ್ಯಂತ 5,14,000 ನೋಂದಣಿಯಾಗಿದ್ದು ಈ ಪೈಕಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಸೂರ್ಯ ಘರ್‌ ಮುಫ್ತ್ ಬಿಜ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೂಡಿಯಲ್ಲಿರುವ ಕೆಪಿಟಿಸಿಎಲ್‌ ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

“ಪಿಎಮ್‌ ಸೂರ್ಯ ಘರ್‌ ಯೋಜನೆಗೆ ಈವರೆಗೆ 5.14 ಲಕ್ಷ ನೋಂದಣಿಯಾಗಿದ್ದು, ಈ ಪೈಕಿ ಸುಮಾರು 1,17,000 ಅರ್ಜಿಗಳು ಸ್ವೀಕೃತವಾಗಿವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಎಮ್ಎನ್‌ಆರ್‌ ಇ ಪೋರ್ಟಲ್‌ ನಲ್ಲಿ 353 ಖಾಸಗಿ ಏಜೆನ್ಸಿಗಳು ನೋಂದಾಯಿಸಿಕೊಂಡಿವೆ,” ಎಂದು ಬೆಸ್ಕಾಂ ಎಂಡಿ ವಿವರಿಸಿದರು.

“ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು  ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿ ಸಾಧಿಸಲು ಕೊಡುಗೆ ನೀಡುತ್ತೇವೆ,” ಎಂದು‌ ಅವರು ಹೇಳಿದರು.

ಗ್ರಿಡ್ ಸಂಪರ್ಕಿತ ಮೇಲ್ಛಾವಣಿ ಸ್ಥಾವರಗಳಿಗೆ ಕೇಂದ್ರ ಸರ್ಕಾರವು  30,000 ರೂ. ರಿಂದ  78,000ರೂ. ವರೆಗೆ ಸಹಾಯಧನ ನೀಡುತ್ತದೆ ಮತ್ತು ಈ ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯ ಸಹ ಇರುತ್ತದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಪಡೆಯಲು ಅಪಾರ್ಟ್‌ಮೆಂಟ್ ಫೆಡರೇಶನ್‌ ಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಇರುವ ಸಮಸ್ಯೆಗಳ  ಕುರಿತು ಕಾರ್ಯಾಗಾರದಲ್ಲಿ ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಡಿ, ಈ ಯೋಜನೆಯ ಸಾಲ ಸೌಲಭ್ಯದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ , ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಪ್ರತಿನಿಧಿಗೆ   ಸೂಚಿಸಿದರು.

ಪ್ರಸ್ತುತ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯವು 65 ವರ್ಷ ವಯೋಮಿತಿಗೆ ಸೀಮಿತವಾಗಿರುತ್ತದೆ. 65 ವರ್ಷ ಮೇಲ್ಪಟ್ಟ ಗ್ರಾಹಕರು, ಸಾಲ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಜಂಟಿ ಅರ್ಜಿದಾರರನ್ನಾಗಿ ಸೇರಿಸಿ ಸಾಲವನ್ನು ಪಡೆಯಬಹುದು ಎಂದು ಎಸ್‌ ಎಲ್‌ ಬಿಸಿ ಪ್ರತಿನಿಧಿ ಮಾಹಿತಿ ನೀಡಿದರು.

ಪಿಎಮ್ ಸೂರ್ಯ ಘರ್‌ ಯೋಜನೆಯಡಿಯಲ್ಲಿ ಸಾಲ ಪಡೆಯಲು ಬ್ಯಾಂಕ್‌ ಗಳಿಗೆ ಮೇಲಾಧಾರ ಭದ್ರತೆಯ ಅಗತ್ಯವಿರುವುದಿಲ್ಲ ಎಂದು ಬ್ಯಾಂಕರ್‌ ಗಳ ಪ್ರತಿನಿಧಿ‌ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಯೋಜನೆಯಡಿಯಲ್ಲಿ ಬ್ಯಾಂಕ್‌ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ, ಬ್ಯಾಂಕ್‌ ಗಳು ತಮ್ಮನ್ನು ಎಮ್‌ ಎಸ್‌ ಎಮ್‌ ಇ ಎಂದು ಪರಿಗಣಿಸುತ್ತಿವೆ. ಆದರೆ ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಗಳು ಎಮ್‌ ಎಸ್‌ ಎಮ್‌ ಇ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು ಬೆಸ್ಕಾಂ ಎಂಡಿ ಅವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ ಎಲ್‌ ಬಿಸಿ ಪ್ರತಿನಿಧಿ, ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಗಳಿಗೆ ಸಾಲ ನೀಡುವ ಬಗ್ಗೆ ಎಮ್‌ ಎನ್‌ ಆರ್‌ ಇ ನಿಂದ ಸ್ಪಷ್ಟ ನಿರ್ದೇಶನ ಇಲ್ಲದಿರುವ ಕಾರಣ, ಇದಕ್ಕೆ ಸಂಬಂಧಪಟ್ಟ ಮಾರ್ಗ ಸೂಚಿಗಳನ್ನು ಹೊರಡಿಸುವಂತೆ ಎಮ್‌ಎನ್‌ಆರ್‌ಇ ಯನ್ನುಕೋರಲಾಗಿದೆ ಎಂದು ಉತ್ತರಿಸಿದರು.

ರಾಜ್ಯದಲ್ಲಿ ಸುಮಾರು 37 ಲಕ್ಷ ಗೃಹ ಜ್ಯೋತಿಯೇತರ ಗ್ರಾಹಕರಿಗೆ ಯೋಜನೆಯನ್ನು ತಲುಪಿಸುವ ಉದ್ದೇಶದೊಂದಿಗೆ ರಾಜ್ಯದ ನೋಡಲ್ ಏಜೆನ್ಸಿಯಾದ ಬೆಸ್ಕಾಂ ಇದರ ತ್ವರಿತ ಅನುಷ್ಠಾನಕ್ಕೆ ಮುಂದಾಗಿದೆ.

ಬೆಂಗಳೂರಿನ ವಿವಿಧ ಅಪಾರ್ಟ್‌ ಮೆಂಟ್‌ ಫೆಡರೇಷನ್‌ ಪ್ರತಿನಿಧಿಗಳು, ನೋಂದಾಯಿತ ಖಾಸಗಿ ಏಜೆನ್ಸಿಗಳ ಪ್ರತಿನಿಧಿಗಳು, ಎಸ್‌ ಎಲ್‌ ಬಿಸಿ ಪ್ರತಿನಿಧಿ, ಬೆಸ್ಕಾಂನ ತಾಂತ್ರಿಕ ನಿರ್ದೇಶಕ ರಮೇಶ್ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರಧಾನಿ-ಸೂರ್ಯ ಘರ್ ಸಂದರ್ಭ: ಮುಫ್ತ್ ಬಿಜ್ಲಿ ಯೋಜನೆ

ಕೇಂದ್ರ ಸರ್ಕಾರದ ಮೇಲ್ಛಾವಣಿಯ ಸೌರ ವಿದ್ಯುತ್ ಯೋಜನೆ- ಪ್ರಧಾನಮಂತ್ರಿ  ಸೂರ್ಯ್‌ ಘರ್ ಮುಫ್ತ್ ಬಿಜ್ಲಿ ಯೋಜನೆ ಆರಂಭಿಸಿದೆ.

2025-26 ರವರೆಗೆ ಒಟ್ಟು 750  ಶತಕೋಟಿ ರೂ. ವೆಚ್ಚದೊಂದಿಗೆ, ಈ ಯೋಜನೆಯು ದೇಶಾದ್ಯಂತ 10 ದಶಲಕ್ಷ ಮನೆಗಳಿಗೆ ಮಾಸಿಕ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್  ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯು 2024ರ ಫೆಬ್ರವರಿಯಲ್ಲಿ ಆರಂಭವಾದ ಒಂದು ತಿಂಗಳೊಳಗೆ 10 ದಶಲಕ್ಷಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.

ಪ್ರಾರಂಭವಾದಾಗಿನಿಂದ, 6.3 ಲಕ್ಷ ಸ್ಥಾಪನೆಗಳು ಕೇವಲ 9 ತಿಂಗಳಲ್ಲಿ ಪೂರ್ಣಗೊಂಡಿವೆ. ಈ ಮೂಲಕ ಮಾಸಿಕ ಸ್ಥಾಪನೆ ದರ 70,000 ಆಗಿದೆ.

ಗ್ರಿಡ್-ಸಂಪರ್ಕಿತ ಛಾವಣಿಯ ಸೌರ ಛಾವಣಿಯ ಪ್ರಯೋಜನಗಳು

* ಹೆಚ್ಚುವರಿ ಸ್ಥಳಾವಕಾಶದ ಅಗತ್ಯವಿಲ್ಲ.

* 78,000 ರೂ. ವರೆಗೆ ಸರ್ಕಾರದ ಸಬ್ಸಿಡಿ.

* ವಿದ್ಯುತ್ ಬಿಲ್‌ ಹೊರೆ ತಪ್ಪುವುದು.

* ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನದ  ಬಳಕೆ

* ಕನಿಷ್ಠ ನಿರ್ವಹಣೆ ವೆಚ್ಚ.

* ಇಂಗಾಲದ ಹೊರಸೂಸುವಿಕೆ ತಗ್ಗುವುದು.

ಸಬ್ಸಿಡಿ

  1. 1ಕಿ.ವ್ಯಾ – 2ಕಿ.ವ್ಯಾ ಸಾಮರ್ಥ್ಯದ ಘಟಕ 30,000-60,000 ರೂ.
  2. 2 ಕಿ.ವ್ಯಾ. – 3 ಕಿ.ವ್ಯಾ. ಸಾಮರ್ಥ್ಯ 60,000- 78,000 ರೂ.
  3. 3 ಕಿ.ವ್ಯಾ. ಗಿಂತ ಹೆಚ್ಚಿನ ಸಾಮರ್ಥ್ಯದ ಘಟಕ ಗರಿಷ್ಠ ಸಬ್ಸಿಡಿ 78,000 ರೂ.

ENGLISH SUMMARY..

5.14 Lakhs registration for PM-Surya Ghar: BESCOM MD Mahantesh Bilagi

BANGALORE: The Bangalore Electricity Supply Company (BESCOM) held a day-long workshop on Saturday to encourage the adoption of PM-Surya Ghar: Muft Bijli Yojana. The workshop saw a huge attendance from the various Resident Welfare Associations (RWA) from Bangalore and the Solar rooftop vendors that brainstormed and discussed the implementation of the scheme at Karnataka Power Transmission Corporation Ltd (KPTCL) Human Resource Development Centre at Hoodi, Whitefield.
“ Out of 5.15 lakh registration to the scheme, 1.17 lakh applicants have been accepted under this scheme. To execute this scheme, 353 private vendors have registered in MNRE portal. We aim to promote the scheme under the able leadership of our Energy Minister KJ George to promote the use of solar energy in households across the state, thereby reducing our dependence on conventional energy sources and contributing to our national renewable energy targets,” Mahantesh Bilagi, Managing Director, BESCOM, said during the workshop, highlighting the benefits of the scheme and empowering the audience with this knowledge.
He explained that the government provides a subsidy ranging from Rs 30,000 up to Rs 78,000 for domestic grid-connected rooftop plants and loan facilities available from the Banks to install the Solar panels.
During the workshop, many Resident Welfare Associations (RWA) members raised hurdles to avail of the PM-Surya Ghar scheme. Responding to the query, BESCOM MD Mahantesh Bilagi instructed the representatives of the SLBC to provide accurate information about loan facilities to the scheme.
At present to avail of the loan facility the Banks have fixed the age limit of 65 years. Consumers above 65 years desire to avail of the bank loan, they can give their family members as co-borrowers, said the representative of SLBC.
Further, SLBC representative said that Banks will not ask for any collateral security to avail of the loan facility to PM Surya Ghar.
However, Apartment Federations representatives pointed out that, while applying the loans, Banks are considered them as MSME, though Apartments have not come under MSME purview.
To release loans to Apartments, MNRE has not issued specific guidelines, now we have requested MNRE to issue guidelines with regard to apartment federations, SLBC representative replied.
The government is actively looking to target non-Gruha Jyothi consumers, who are estimated to be around 37 lakh households in the state. BESCOM is the state nodal agency for the speedy implementation of Surya Ghar Muft Bijli Yojna.
Context On PM-Surya Ghar: Muft Bijli Yojana
The government of India has launched a groundbreaking scheme for the rooftop solar segment – PM-Surya Ghar: Muft Bijli Yojana. With a total outlay of Rs 750 billion until 2025-26, the scheme aims to provide free electricity up to 300 units monthly to 10 million households across the country. The scheme has received an overwhelming response, with over 10 million registrations within a month of its launch in February 2024. Since its launch in Feb 2024, 6.3 lakh installations have been completed in just nine months, resulting in an impressive monthly installation rate of 70,000, ten times higher than the pre-scheme average. This remarkable participation is a testament to the potential and promise of the PM-Surya Ghar: Muft Bijli Yojana, instilling us with a sense of hope and optimism for its future.
Advantages of the grid-connected Rooftop solar system
• No need for extra space.
• Government subsidy up to Rs 78,000./
• Immediate relief from the electricity bill.
• Increased use of Renewable energy
• Minimum maintenance cost.
• Reduced Carbon Emissions
Subsidy by MNRE
No Plant Capacity Applicable Subsidy
1 1Kw – upto 2kw Capacity INR 30,000-60,000/
2 Upto 2 Kw – 3 Kw Capacity INR 60,000- 78,000/
3 More than 3kw INR 78,000/- Maximum fixed

Key words: 5.14 Lakhs, registration, PM-Surya Ghar