ಮೈಸೂರು, ಡಿ.೧೧,೨೦೨೪ : (www.justkannada.in news) ಕನ್ನಡದ ಹೆಸರಾಂತ ಸಾಹಿತಿ ದೇವನೂರ ಮಹದೇವ ಅವರಿಗೆ ವೈಕಂ ಪ್ರಶಸ್ತಿ. ತಮಿಳುನಾಡು ಸರ್ಕಾರದ 2024ರ ಸಾಲಿನ “ವೈಕಂ” ಪ್ರಶಸ್ತಿಗೆ ದೇಮ ಬಾಜನ.
ದಮನಿತರ ಪರ ಶ್ರಮಿಸಿದವರಿಗೆ ನೀಡುವ ವೈಕಂ ಪ್ರಶಸ್ತಿ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಘೋಷಣೆ. ಈ ಪ್ರಶಸ್ತಿ 1 ಲಕ್ಷ ರೂ. ನಗದು ಹಾಗೂ ಸುವರ್ಣ ಲೇಪಿತ ಪದಕ ಪ್ರಮಾಣಪತ್ರ ಒಳಗೊಂಡಿದೆ.
ಆದರೆ ಈ ಬಾರಿ ವಿಶೇಷವಾಗಿ ಸಾಹಿತಿ ದೇವನೂರು ಮಹಾದೇವ ಅವರಿಗೆ 5 ಲಕ್ಷ ರೂ. ನಗದು ಬಹುಮಾನ ಘೋಷಣೆ. ನಾಳೆ ಕೇರಳಾದ ವೈಕಂ ನಲ್ಲಿ ಪ್ರಶಸ್ತಿ ಪ್ರದಾನ.
“ವೈಕಂ” ಹೋರಾಟದಲ್ಲಿ ತಂದೆ ಪರಿಯಾರ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಇದರ ಶತಮಾನೋತ್ಸವ ಸಮಾರೋಪದಲ್ಲಿ ಈ ಪ್ರಶಸ್ತಿ ಪ್ರದಾನ.
ತಮಿಳುನಾಡಿನ ಸಿಎಂ ಸ್ಟಾಲಿನ್ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ನಾಳಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
key words: Vaikam Award, Devanura Mahadeva, Kerala, tamilnadu, cm
Vaikam Award to Devanura Mahadeva: To be presented in Kerala tomorrow