ಎಸ್.ಎಂ ಕೃಷ್ಣ ಮತ್ತು ತಮ್ಮ ನಡುವಿನ ಒಡನಾಟ ಸ್ಮರಿಸಿದ ಮಾಜಿ ಸಚಿವ ಡಿಸಿ ತಮ್ಮಣ್ಣ

ಮಂಡ್ಯ,ಡಿಸೆಂಬರ್,11,2024 (www.justkannada.in):  ನಿನ್ನೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಮಾಜಿ ಸಿಎಂ ಎಸ್.ಎಂ  ಕೃಷ್ಣ  ಅವರ ಅಂತ್ಯಕ್ರಿಯೆ ಇಂದು ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನಹಳ್ಳಿಯಲ್ಲಿ ನಡೆಯಲಿದ್ದು ಪಾರ್ಥೀವ ಶರೀರ ಅಂತಿಮಯಾತ್ರೆ ಚನ್ನಪಟ್ಟಣ ತಲುಪಿದೆ.

ಈ ನಡುವೆ ಮಾಜಿ ಸಿಎಂ ಎಸ್ . ಎಂ ಕೃಷ್ಣ  ಮತ್ತು ತಮ್ಮ ನಡುವಿನ ಒಡನಾಡವನ್ನ ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಡಿಸಿ ತಮ್ಮಣ್ಣ ಸ್ಮರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿ ತಮ್ಮಣ್ಣ, ಎಸ್.ಎಂ ಕೃಷ್ಣ ಅವರು ರಾಜಕೀಯಕ್ಕೆ ಬರುವ ಮುನ್ನವೇ ನನಗೆ ಪರಿಚಯವಾಗಿದ್ದರು. ನನ್ನ ಕಾರ್ಯವೈಖರಿ ನೋಡಿ ಶಾಸಕರನ್ನಾಗಿ ಮಾಡಿದ್ರು. ನಾನು ಕೊಟ್ಟ ಕೆಲ ಸಲಹೆಗಳನ್ನ ಎಸ್ಎಂ ಕೃಷ್ಣ ಅವರು ಸ್ವೀಕರಿಸುತ್ತಿದ್ದರು.  ನನ್ನ ಬಳಿ ನೀರಾವರಿ ಪ್ಲಾನ್ ಕೇಳಿ ಖುಷಿಪಟ್ಟಿದ್ದರು ಎಂದು ತಿಳಿಸಿದರು.

Key words: Former Minister, DC Thammanna, SM Krishna