ಬೆಳಗಾವಿ,ಡಿಸೆಂಬರ್,12,2024 (www.justkannada.in): ಪಂಚಮಸಾಲಿ ಹೋರಾಟಗಾರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಕ್ರಮವನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡರು.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡರು. ಹೋರಾಟಗಾರರು ತಾವೇ ಮೊದಲು ಚಪ್ಪಲಿ ಕಲ್ಲು ಎಸೆದರು. ಸ್ವಾಮೀಜಿ ಸೇರಿ ಎಲ್ಲರೂ ಕಾನೂನು ಕೈಗೆತ್ತಕೊಂಡರು. ಸ್ವಾಮೀಜಿ ಸೇರಿ ಎಲ್ಲರೂ ಕಾನೂನು ಉಲ್ಲಂಘಿಸಿದ್ದಾರೆ . ಹೀಗಾಗಿ ಲಾಠಿಚಾರ್ಜ್ ಅನಿವಾರ್ಯವಾಗಿತ್ತು ಎಂದು ಹೇಳಿದರು.
ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಎಂದಾಗ ಅವರನ್ನ ತಡೆಯುವುದು ಅನಿವಾರ್ಯವಾಗಿತ್ತು. ಮುತ್ತಿಗೆ ಹಾಕಲು ಹೀಗೆ ಅವಕಾಶ ನೀಡಿದರೆ ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ಕೋರ್ಟ್ ತಡೆಯಾಜ್ಞೆ ಇದ್ದಾಗಲೂ ನಿರ್ಬಂಧದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಸವಜಯಮೃತ್ಯುಂಜಯಸ್ವಾಮೀಜಿ ಸೇರಿ ಎಲ್ಲರೂ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಫೋಟೊ ದಾಖಲೆಗಳಿವೆ. ಪ್ರತಿಭಟನಾಕಾರರು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಲಾಠಿಚಾರ್ಜ್ ಅನಿವಾರ್ಯವಾಗಿತ್ತು ಎಂದು ಸ್ಪಷ್ಟನೆ ನೀಡಿದರು.
Key words: Panchamasali, Lathicharge, Home Minister, Parameshwar