ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್: ಪೊಲೀಸರ ಕ್ರಮ ಸಮರ್ಥಿಸಿಕೊಂಡ  ಸಚಿವ ಕೆಎನ್ ರಾಜಣ್ಣ

ಬೆಳಗಾವಿ,ಡಿಸೆಂಬರ್,12,2024 (www.justkannada.in): 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹೋರಾಟಗಾರು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಕಲ್ಲುತೂರಾಟ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದೀಗ ಪೊಲೀಸರ ಈ ಕ್ರಮವನ್ನ ಸಹಕಾರ ಸಚಿವ ಕೆ.ಎನ್ ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಸಾರ್ವಜನಿಕರಿಗೆ ತೊಂದರೆ ಆದ್ರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.  ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ರೆ ಅನಾಹುತ ಆಗುತ್ತಿತ್ತು. ಹೀಗಾಗಿ ಲಾಠಿಚಾರ್ಜ್ ನಡೆಸಿದ್ದಾರೆ ಎಂದರು.

ಸರ್ಕಾರ ಯೋಚನೆ ಮಾಡಿ ನಿರ್ಧಾರ ಕೈಗಳ್ಳಬೇಕಾಗುತ್ತದೆ. ಸರ್ಕಾರ ಕಂಕಣಬದ್ದವಾಗಿ ನಿರ್ಧಾರ ತೆಗೆದಕೊಳ್ಳುತ್ತದೆ. ಸರ್ಕಾರ ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಧಾರ ತೆಗೆದುಕೊಳ್ಳುತ್ತದೆ  ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

Key words: Lathicharge, Panchamasali activists,  Minister, KN Rajanna