ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರಕರಣ ದಾಖಲು

ಮೈಸೂರು,ಡಿಸೆಂಬರ್,12,2024 (www.justkannada.in): ಮೆಡಿಕಲ್‌ ಕಾಲೇಜು ವಿದ್ಯಾರ್ಥಿನಿ ಮೇಲೆ ಬಾಡಿಗೆ ಮನೆ ಮಾಲೀಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಬನ್ನಿಮಂಟಪ ಜೆಎಸ್ ಎಸ್ ನಗರದ ನಿವಾಸಿ ಅಮಾನುಲ್ಲಾ ಖಾನ್ ವಿರುದ್ದ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಮೈಸೂರಿನ ಜೆಎಸ್ ಎಸ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳದ ವಿದ್ಯಾರ್ಥಿನಿ ಮೇಲೆ ಬಾಡಿಗೆ ಮನೆ ಮಾಲೀಕ ಅಮಾನುಲ್ಲಾ ಖಾನ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು ಈ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ ನಲ್ಲಿ ಅಮಾನುಲ್ಲಾ ಖಾನ್ ಮನೆಯಲ್ಲಿ ವಿದ್ಯಾರ್ಥಿನಿಯು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಈ ಮಧ್ಯೆ  ಒಬ್ಬಂಟಿಯಾಗಿದ್ದ ಸಮಯ ‌ನೋಡಿ ವಿದ್ಯಾರ್ಥಿನಿ ಮೇಲೆ  ಮನೆ ಮಾಲೀಕ  ಅಮಾನುಲ್ಲಾಖಾನ್ ಅತ್ಯಾಚಾರಕ್ಕೆ ಯತ್ನಿಸಿದ್ದು, ಬಟ್ಟೆ ಹಿಡಿದು ಎಳೆದಾಡಿ ಮೊಬೈಲ್ ಕಿತ್ತು ಬಿಸಾಕಿ ನನ್ನ ಜೊತೆ ಸಹಕರಿಸದಿದ್ದರೆ ಸಾಯಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಈ ವೇಳೆ ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಪ್ರಿಯಕರಿನಿಗೆ ಕರೆ ಮಾಡಿದ್ದು, ಪ್ರಿಯಕರ ಹಾಗೂ ಯುವತಿ ಇಬ್ಬರು ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಇದೀಗ ಅಮಾನುಲ್ಲಾ ಖಾನ್ ವಿರುದ್ದ ಎಫ್ ಐಆರ್ ದಾಖಲಾಗಿದೆ.

Key words: Attempted, rape, student, Mysore