ನ್ಯಾಷನಲ್ ಕಾಲೇಜಿನಲ್ಲಿ ‘ಸೈನ್ಸ್ ಇನ್ ಆಕ್ಷನ್’ ವಿಜ್ಞಾನ ಜಾಥಾಕ್ಕೆ ಚಾಲನೆ

ಬೆಂಗಳೂರು,ಡಿಸೆಂಬರ್,12,2024 (www.justkannada.in):  ಬಿ. ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಇಸ್ರೋ ಸಹಭಾಗಿತ್ವದಲ್ಲಿ, ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ `ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಮೇಳದ ಜಾಥಾಕ್ಕೆ ಇಂದು ಚಾಲನೆ ನೀಡಲಾಯಿತು.

ಜನತೆಗೆ ವೈಜ್ಞಾನಿಕತೆಯ ಸಂದೇಶ ಸಾರುವುದರ ಜೊತೆಗೆ, ಮಕ್ಕಳಲ್ಲಿ ವಿಜ್ಞಾನದತ್ತ ಆಸಕ್ತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು ನಗರದಲ್ಲಿ ಜಾಥಾ ನಡೆಸಿದರು.  ಇದೇ ವೇಳೆ ವಿಜ್ಞಾನದ ಕುರಿತ ಅನೇಕ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಇನ್ನು ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಮೇಳದಲ್ಲಿ ನೂರಾರು ಸಂವಾದಾತ್ಮಕ ವಿಜ್ಞಾನ ಮಾದರಿಗಳು, ವಿದ್ಯಾರ್ಥಿಗಳೇ ತಯಾರಿಸಿರುವ ಹಲವು ಕ್ರಿಯಾತ್ಮಕ ಮಾದರಿಗಳು, ಇಸ್ರೋದ ಉಪಗ್ರಹಗಳ ಸ್ಕೇಲ್ಡ್ ಮಾದರಿಗಳ ಪ್ರದರ್ಶನ ಇರಲಿದೆ.

ಜಾಥಾದಲ್ಲಿ ಎನ್ ಇ ಎಸ್ ಅಧ್ಯಕ್ಷರಾದ  ಡಾ.ಎಚ್.ಎನ್.ಸುಬ್ರಮಣ್ಯ, ಎನ್ ಇಎಸ್ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿ, ಡಾ.ಎಚ್. ಎನ್. ಎನ್ .ಇಂಜಿನಿಯರಿಂಗ್ ಕಾಲೇಜಿನ ಚೇರ್ಮನ್ ವಿ.ವೆಂಕಟಶಿವಾರೆಡ್ಡಿ,  ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ, ಪ್ರಾಂಶುಪಾಲರಾದ ಡಾ.ಪಿ.ಎಲ್.ರಮೇಶ್, ಎಚ್.ಎನ್.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯದೇವಪ್ಪ, ಪ್ರೊ.ಮಮತಾ, ಕಾಲೇಜ್ ಕೌನ್ಸಿಲ್ ಸೆಕ್ರೆಟರಿ ಪ್ರೊ.ಚೆಲುವಪ್ಪ, ಅಧ್ಯಾಪಕರು ಭಾಗವಹಿಸಿದ್ದರು.

Key words: ‘Science in Action, science jatha, National College