ಅವರಿಗೆ ಕೇವಲ ರಾಜಕೀಯ ಬೇಕು: ನಮಗೆ ಅಭಿವೃದ್ಧಿ ಬೇಕು- ಸಚಿವ ಸಂತೋಷ್ ಲಾಡ್ ವಾಗ್ದಾಳಿ

ಬೆಳಗಾವಿ,ಡಿಸೆಂಬರ್,12,2024 (www.justkannada.in):  ಸ್ಪೀಕರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ ಬಿಜೆಪಿ ನಾಯಕರ ವಿರುದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಬಿಜೆಪಿಯುವರು ಕೇವಲ ಆರೋಪ ಮಾಡುತ್ತಾರೆ ಅಷ್ಟೆ. ನಮ್ಮ ಸರ್ಕಾರ ಬಂದಾಗೆಲ್ಲಾ, ಎಷ್ಟು ಬಾರಿ ವಿಧಾನಸಭೆ ನಡೆಸಿದ್ದೇವೆ ಕೇಳಿ ನೋಡಿ. ಅವರು  ವರ್ಷದಲ್ಲಿ ಎಷ್ಟು ಬಾರಿ  ಅಧಿವೇಶನ ನಡೆಸಿದ್ದಾರೆ. ವರ್ಷದಲ್ಲಿ 50 ದಿನವು ಕೂಡ ಅಧಿವೇಶನ  ನಡೆಸಿಲ್ಲ. ಆದರೆ ನಾವು ವರ್ಷಕ್ಕೆ 80 ರಿಂದ 100 ದಿನ ಅಧಿವೇಶನ ನಡೆಸಿದ್ದೇವೆ. ಬಿಜೆಪಿಯವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು ಎಂದು  ಕುಟುಕಿದರು.

ಸ್ಪೀಕರ್ ವಿರುದ್ದ ಅವಿಶ್ವಾಸ ಮಂಡನೆ ಮಾಡಲು  ಬಿಜೆಪಿಯವರ ಬಳಿ ಏನು ಕಾರಣವಿದೆ.  ಚರ್ಚೆಗೆ ಅವಕಾಶ ಕೊಟ್ಟಿಲ್ವಾ ಹೇಳಿ. ವಕ್ಫ್, ಮುಡಾ, ಮೆಡಿಕಲ್ ಎಲ್ಲಾ ವಿಚಾರದಲ್ಲಿ ಅವಕಾಶ ಕೊಟ್ಟಿದ್ದೇವೆ. ಕೇಂದ್ರದವರು ಅದಾನಿ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದಾರಾ? ಕೇಳಿ ಏಕ ಪಕ್ಷಿಯು ಅಂದ್ರೆ ಏನು ಯಾವ ವಿಚಾರದಲ್ಲಿ ನಾವು ಚರ್ಚೆ ಮಾಡುತ್ತಿಲ್ಲಾ ಹೇಳಲಿ ಎಂದು ಸಂತೋಷ್ ಲಾಡ್ ಕಿಡಿಕಾರಿದರು.

Key words: BJP, politics, We, development, Minister, Santosh Lad