ಮೈಸೂರು, ಡಿಸೆಂಬರ್ 14,2024 (www.justkannada.in): ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪ ನೀಡಲಾಗುತ್ತಿದ್ದು ಇದಕ್ಕಾಗಿ ನೆರವು ನೀಡಲು ಅಮೆರಿಕ ಮುಂದಾಗಿದೆ.
ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕಾ ರಾಯಭಾರ ಕಚೇರಿ ಧನ ಸಹಾಯ ಮಾಡಲು ಮುಂದಾಗಿದೆ. ಅಮೆರಿಕಾದ ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಜಯಲಕ್ಷ್ಮಿ ವಿಲಾಸ ಅರಮನೆ ಸಂರಕ್ಷಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಅರಮನೆ ಹಾಗೂ ಅಲ್ಲಿನ ಕಲಾಕೃತಿಗಳ ರಕ್ಷಣೆಗೆ ಕೋಟ್ಯಾಂತರ ಹಣ ನೀಡಲು ಮುಂದಾಗಿದೆ
ಅಮೆರಿಕದ ಪಬ್ಲಿಕ್ ಡಿಪ್ಲೊಮಸಿ ಅಧಿಕಾರಿ ಜೀನ್ ಬ್ರಿಗ್ಯಾಂಟಿಯವರು ಜಯಲಕ್ಷ್ಮೀ ವಿಲಾಸ ಅರಮನೆಗೆ ಭೇಟಿ ನೀಡಿ, ರಾಜರ ಕಾಲದ ವಸ್ತುಗಳು, ಒಡವೆ, ಆಯುಧಗಳನ್ನು ವೀಕ್ಷಿಸಿದರು. ಅರಮನೆ ಮತ್ತು ಅಲ್ಲಿನ ಕಲಾಕೃತಿಗಳ ರಕ್ಷಣೆಗೆ ಅಮೆರಿಕ ರಾಯಭಾರ ಕಚೇರಿಯಿಂದ 2.4 ಕೋಟಿ ರೂ. ನೆರವು ನೀಡಿದೆ. 2025ಕ್ಕೆ ಅರಮನೆಯ ಸಂರಕ್ಷಣೆ ಕಾರ್ಯ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಅರಮನೆಯಲ್ಲಿರುವ ರಾಜರ ಕಾಲದ ವಸ್ತುಗಳು, ರಾಜರ ಕಾಲದ ಒಡವೆ ಆಯುಧಗಳು, ಸಾಹಿತಿಗಳ ಮೂಲ ಬರಹ ಪ್ರಶಸ್ತಿಗಳು ಇಂಡೋ ಅಮೆರಿಕಾ ಸಂಬಂಧ ಪ್ರವಾಸೋದ್ಯಮಕ್ಕೆ ಪೂರಕವಾಗಿವೆ.
Key words: Mysore, Jayalakshmi Vilas Palace, Assistance, America