ಕಲಬುರ್ಗಿ ,ಡಿಸೆಂಬರ್,14, 2024 (www.justkannada.in): ಕೋವಿಡ್’ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಿದ್ದರು ಯಾರನ್ನು ಬಿಡಲ್ಲ ಎಂದು ಸಚಿವ ಡಾ.ಶರಣಾಪ್ರಕಾಶ್ ಪಾಟೀಲ್ ತಿಳಿಸಿದರು.
ಇಂದು ಈ ಕುರಿತು ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಕೋವಿಡ್ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕೋವಿಡ್ ಕಾಲದಲ್ಲಿ ಹಗರಣ ನಡೆದಿತ್ತು. ಆ ಪ್ರಕರಣ ಸಂಬಂಧ ಈಗ ಎಫ್‌ಐಆರ್ ದಾಖಲಾಗಿದೆ, ತನಿಖೆ ಮಾಡಲು ಪೊಲೀಸರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡಿದ್ದೇವೆ. ತನಿಖೆ ಮಾಡುತ್ತಿದ್ದ ವೇಳೆ ನಾನು ಹೆಸರು ಹೇಳಿದರೆ ತಪ್ಪಾಗುತ್ತದೆ. ಅವ್ಯವಹಾರ ಆಗಿದೆ ಎಂದು ನ್ಯಾ. ಕುನ್ಹಾ ವರದಿಯಲ್ಲಿ ಉಲ್ಲೇಖ ಆಗಿದೆ. ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗುತ್ತದೆ. ಇದಕ್ಕೆ ಬಿಜೆಪಿಯವರು ಯಾಕೆ ಭಯ ಪಡಬೇಕು? ಎಂದು ಪ್ರಶ್ನಿಸಿದರು.
ಯಾರನ್ನು ಭಯ ಬೀಳಿಸುವುದಕ್ಕೆ ನಾವು ತನಿಖೆ ಮಾಡಿಸುತ್ತಿಲ್ಲ. ಕೋವಿಡ್ ವೇಳೆ ಆಕ್ಸಿಜನ್ ಇಲ್ಲದೆ ಜನ ಬೀದಿಯಲ್ಲಿ ಹೆಣವಾಗಿದ್ದಾರೆ ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ರಾಜ್ಯದ ಜನರಿಗೆ ಮಾತು ಕೊಟ್ಟಂತೆ ನಾವು ತನಿಖೆ ಮಾಡಿಸುತ್ತೇವೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
Key words: Covid scam, culprits, action, Minister, Sharan Prakash Patil