ಬಿವೈ ವಿಜಯೇಂದ್ರ ವಿರುದ್ದ 150 ಕೋಟಿ ಆಮಿಷ ಆರೋಪ:  ಕಾಂಗ್ರೆಸ್ ವಿರುದ್ದ ಆರ್.ಅಶೋಕ್ ವಾಗ್ದಾಳಿ

ಬೆಳಗಾವಿ,ಡಿಸೆಂಬರ್,16,2024 (www.justkannada.in):  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ 150 ಕೋಟಿ ರೂ. ಆಮಿಷ ಒಡ್ಡಿದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ವಿಜಯೇಂದ್ರ 150 ಕೋಟಿ ರೂ. ಯಾಕೆ ಕೊಡಬೇಕು.  ವಿಷಯ ಡೈವರ್ಡ್ ಮಾಡಲು ಕಾಂಗ್ರೆಸ್ ಹುನ್ನಾರ ಮಾಡಿದೆ.  ಕಾಂಗ್ರೆಸ್ ನವರೇ ಆಮಿಷ ಒಡ್ಡಿದರು ಎಂದು ಮಾಣಿಪ್ಪಾಡಿ ಹೇಳಿದ್ದಾರೆ.  ಆದರೆ ಸದನ ಡೈವರ್ಟ್ ಮಾಡುಲು ಪ್ಲಾನ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಈಗಾಗಲೇ ಅಧೀವೇಶನದಲ್ಲಿ ವಕ್ಫ್ ವಿಚಾರ ಚರ್ಚಿಸಿದ್ದೇವೆ. ಇಂದು ಸದನದಲ್ಲಿ ಉತ್ತರ ಕರ್ನಾ ಟಕದ ಬಗ್ಗೆ ಚರ್ಚಿಸಲು ಆಗ್ರಹಿಸುತ್ತೇನೆ. ಆದ್ರೆ ಕಾಂಗ್ರೆಸ್ ನಾಯಕರು ಹಗರಣದಲ್ಲಿ ಸಿಲುಕಿದ್ದಾರೆ. ಸರ್ಕಾರಕ್ಕೆ ಪಲಯಾನ ಮಾಡುವ ಆತುರ.  ಉತ್ತರ ಕರ್ನಾಟಕ ಚರ್ಚೆಗೆ ಸರ್ಕಾರ ಸಿದ್ದವಿಲ್ಲ.  ಕಾಂಗ್ರೆಸ್ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ಚರ್ಚೆ ಮಾಡಿದರೆ ಹೊರಗೆ ಬರುತ್ತೆ ಅನ್ನೋ ಭಯ ಎಂದು ಟೀಕಿಸಿದರು.

Key words:  Rs 150 crore, allegation, BY Vijayendra,  R. Ashok, Congress