ಬೆಳಗಾವಿ,ಡಿಸೆಂಬರ್,16,2024 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ 150 ಕೋಟಿ ರೂ. ಆಮಿಷ ಒಡ್ಡಿದ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿ.ಟಿ ರವಿ, ತನೀಖೆಗೆ ನೀಡುವ ಅಧಿಕಾರ ಸಿಎಂ ಕೈ ನಲ್ಲಿದೆ. ಸಚಿವ ಸಂಫುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸಿಬಿಐ ತನಿಖೆಗೆ ನೀಡಿ ಎಂದು ಆಗ್ರಹಿಸಿದರು.
ವಕ್ಫ್ ಆಸ್ತಿ ಕಬಳಿಸಿರೋದು ಕಾಂಗ್ರೆಸ್ ನಾಯಕರೇ . ಕಾಂಗ್ರೆಸ್ ಅಮಿಷದ ಬಗ್ಗೆ ಅನ್ವರ್ ಹೇಳಿದ್ದಾರೆ . ಅನ್ವರ್ ಮಾನಪ್ಪಾಡಿ ಹೇಳಿರುವುದು ಸತ್ಯ. ಹೀಗಾಗಿ ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಿ ಎಂದು ಸಿಟಿ ರವಿ ಒತ್ತಾಯಿಸಿದರು.
Key words: Rs 150 crore, case, CBI, investigate, CT Ravi