ಡ್ರೋನ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ

ತುಮಕೂರು,ಡಿಸೆಂಬರ್,16,2024 (www.justkannada.in): ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ತುಮಕೂರಿನ ಮಧುಗಿರಿ ಜೆಎಂಎಫ್ ಸಿ ಕೋರ್ಟ್  ಆದೇಶ ಹೊರಡಿಸಿದೆ.

ತುಮಕೂರು ‌ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್​ ರನ್ನು ಪೊಲೀಸರು ಬಂಧಿಸಿದ್ದರು.

ಕಳೆದ ಮೂರು ದಿನಗಳಿಂದ ಡ್ರೋನ್ ಪ್ರತಾಪ್ ​ನನ್ನು ಮಿಡಿಗೇಶಿ ಠಾಣಾ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಸ್ಪೋಟದ ಸ್ಥಳಕ್ಕೆ ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದರು.  ಬಳಿಕ ಭಾನುವಾರ ಇಡೀ‌ ದಿನ ಡ್ರೋಣ್ ಪ್ರತಾಪ್ ರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಪೊಲೀಸರು, ಡ್ರೋನ್ ಪ್ರತಾಪ್ ಮನೆ ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಮಹಜರ್ ಮಾಡಿದ್ದರು. ಜೊತೆಗೆ ವಿಡಿಯೋ ಚಿತ್ರಿಕರಿಸಿದ್ದ ಕ್ಯಾಮರಾಮನ್ ವಿನಯ್ ಹಾಗೂ ಸೋಡಿಯಂ ಖರೀದಿಗೆ ಸಹಕಾರ ‌ನೀಡಿದ್ದ ಪ್ರಜ್ವಲ್ ​ನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದೀಗ ಮಧುಗಿರಿ ಜೆಎಂಎಫ್ ಸಿ ಕೋರ್ಟ್   ಡ್ರೋನ್ ಪ್ರತಾಪ್ ಗೆ ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Key words: Drone Pratap, 10 days, judicial custody