ಮೈಸೂರು,ಸೆ,29,2019(www.justkannada.in) ನಾನು ದೇವರನ್ನ ನಂಬುತ್ತೇನೆ. ವಿಚಾರವಾದಿಗಳು ದೇವರನ್ನ ನಂಬುವುದಿಲ್ಲ ಎಂದು ಬಿಂಬಿಸಿದ್ದಾರೆ. ಕೆಲವು ಸಾಹಿತಿಗಳು ದೇವರೇ ಇಲ್ಲ ಎಂದು ಮಾತನಾಡುತ್ತಾರೆ ಅದು ಸರಿಯಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ, ಸರಕಾರ ನನ್ನನ್ನ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಮೇಲೆ ಕೆಲವರು ಕೇಳಿದ್ರು. ಸರ್ ನೀವು ಒಪ್ಪಿಕೊಂಡ್ರಾ ಎಂದು ಕೇಳಿದ್ರು. ನೀವು ಸಾಹಿತಿಗಳು, ದೇವರ ಪೂಜೆ ಮಾಡಬೇಕು ದೇವಸ್ಥಾನಕ್ಕೆ ಹೋಗ್ಬೇಕು ಅಂತಾರೆ ನೀವು ಹೋಗ್ತೀರಾ ಅಂದ್ರು. ಅಂದ್ರೆ ಅದರ ಅರ್ಥ ಸಾಹಿತಿಗಳು ದೇವರನ್ನ ನಂಬಲ್ಲ ಎಂದು ನಂಬಿದ್ದಾರೆ. ನಾನು ಚಿಕ್ಕವನಾಗಿದ್ದಾಗ ಪ್ರತಿ ಬಾರಿ ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಬರ್ತಿದ್ದೆ ಆದರೆ ಈಗ ವರ್ಷಕ್ಕೆ ಒಮ್ಮೆ ಬರ್ತೇನೆ. ವಿಚಾರವಾದಿಗಳು ದೇವ್ರು ಇಲ್ಲಾ. ಎನ್ನುವ ನಂಬಿಕೆ ಹುಟ್ಟಿಸಿದ್ದಾರೆ ಎಂದರು.
ದೇವರ ಇದ್ದಾನಾ ಇಲ್ಲವಾ ಎನ್ನುವ ವಿಚಾರ ಕುರಿತು ಮಾತನಾಡಿದ ಸಾಹಿತಿ ಎಸ್,ಎಲ್ ಭೈರಪ್ಪ. ದೇವರು ಇದ್ದಾನೆ ಎಂದು ವಿಚಾರವಾದಿಗಳನ್ನ ಕೇಳಿದ್ರೆ ಇಡೀ ಪ್ರಪಂಚ ನೋಡಿದ್ದೇವೆ ಹೀಗಾಗಿ ದೇವರಿಲ್ಲ ಅಂತಾರೆ. ವಿಜ್ಞಾನಿಗಳನ್ನ ಕೇಳಿದ್ರೆ ಗ್ಯಾಲಕ್ಸಿಯ ವಿಸ್ತೀರ್ಣ ನೋಡ್ತಿದ್ರೆ ಊಹೆಯನ್ನೂ ಮಾಡಲಿಕ್ಕೂ ಆಗಲ್ಲ ಅಷ್ಟು ಇದೆ ಎನ್ನುತ್ತಾರೆ. ಕೆಲವು ಸಾಹಿತಿಗಳು ದೇವರೇ ಇಲ್ಲ ಎಂದು ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಹಲವಾರು ಜಿಜ್ಞಾಸೆಗಳಿವೆ. ದೇವರನ್ನು ಸಾಕಾರಾ, ನಿರಾಕಾರ ರೂಪದಲ್ಲಿ ನೋಡುವವರಿದ್ದಾರೆ. ದೇವರನ್ನು ಹೆಣ್ಣಿನ ರೂಪದಲ್ಲಿ ಮೊದಲ ಪೂಜೆ ಮಾಡುತ್ತೇವೆ. ಮಾತೃಪೂಜೆ ನಮ್ಮಲ್ಲಿ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ದಸರಾ ಉದ್ಘಾಟನೆ ಬಳಿಕ ಮಾಡಿದ ಭಾಷಣದ ಸಾರಾಂಶವಿಷ್ಟು…
ದಸರಾ ಉದ್ಘಾಟಿಸಿದ ಬಳಿಕ ಡಾ.ಎಸ್.ಎಲ್.ಭೈರಪ್ಪ ಹೇಳಿಕೆ. ಸಾಹಿತಿಗಳು ದೇವರನ್ನು ನಂಬಬಾರದು ಎಂಬ ಅಭಿಪ್ರಾಯ ಜನರಲ್ಲಿದೆ. ಅದರ ಪ್ರಕಾರ ನಾನು ಸಾಹಿತಿಯಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಬೆಟ್ಟ ಹತ್ತಿ ತಾಯಿಯ ದರ್ಶನ ಮಾಡುತ್ತಿದೆ. ಈಗ ವಯಸ್ಸಿನ ಕಾರಣದಿಂದ ವಾಹನದಲ್ಲಿ ಬೆಟ್ಟಕ್ಕೆ ಬರುತ್ತೇನೆ. ನನಗೆ ದೇವರಲ್ಲಿ ನಂಬಿಕೆ ಇದೆ. ದೇವರಲ್ಲಿ ನಂಬಿಕೆಯಿಲ್ಲದವರು ಪ್ರಗತಿ ಪರರು ಎಂಬ ಭಾವನೆ ಇದೆ.
ನನ್ನ ಮೊಮ್ಮಕ್ಕಳಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದೆ. ಮಕ್ಕಳನ್ನ ಹೊಸಿಲ ಮೇಲೆ ಮಲಗಿಸಿ ತೀರ್ಥ ಹಾಕಿಸಿದ್ದೆ. ಆದ್ರೆ ಕೆಲವರು ನೀವು ವಿಚಾರವಾದಿಗಳು ದೇವರ ಮೇಲೆ ನಂಬಿಕೆ ಇಲ್ಲ ಎಂದಿದ್ರು. ಆದ್ರೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದು ಹೇಳಿಲ್ಲ. ದೇವರಿಗೆ ಎಂದು ಲಿಂಗ ಭೇದ ಮಾಡಬಾರದು. ದೇವರು ಇದ್ದಾನೇಯೇ? ಇದ್ದಾಳೇಯೇ.? ಎನ್ನುವುದಕ್ಕಿಂತ. ದೇವರು ಇದೇಯೇ.? ಎಂದು ಕೇಳಬೇಕಿದೆ. ವಿಚಾರವಾದಿಗಳಿಗೆ ಕೇಳಿದ್ರೆ ಇಲ್ಲ ಎಂದು ಹೇಳುತ್ತಾರೆ.
ದೇವರನ್ನ ಸಾಕಾರ ರೂಪ ನಿರಾಕಾರ ರೂಪದಲ್ಲೂ ನೋಡ್ತಾರೆ. ಹೆಣ್ಣು ದೇವತೆಗೆ ಹೆಚ್ಚು ಮೌಲ್ಯತೆ ಕೊಟ್ಟು ಪೂಜೆ ಮಾಡುವುದರಿಂದ ಮಾತೃ ಬಗೆಗಿನ ಸಂಸ್ಕೃತಿ ಇದೆ.. ಯಾವುದೇ ಊರಿಗೆ ಹೋದರೆ ಮೊದಲು ಅಲ್ಲಿ ಗ್ರಾಮ ದೇವತೆ ಇರುತ್ತದೆ. ಒಂದು ಮದುವೆ ಮಾಡಬೇಕಾದ್ರೆ ಹೆಣ್ಣು ದೇವರ ಪೂಜೆ ಮಾಡಿಯೇ ಮದುವೆ ಮಾಡ್ತಾರೆ. ಹೆಣ್ಣು ದೇವತೆಗೆ ಹೆಚ್ಚು ಪ್ರಾಧಾನ್ಯತೆ ಇದೆ. ಇದು ಹೆಣ್ಣನ್ನು ತುಳಿಯುವ ಸಮಾಜ ಅಂತಾರೆ. ಇಂದು ನೀವು ಮೆಡಿಕಲ್ ಇಂಜೀನಿಯರಿಂಗ್ ಕಾಲೇಜಿಗೆ ಹೋಗಿ ಅಲ್ಲೆಲ್ಲ ಹೆಣ್ಣು ಮಕ್ಕಳೇ ಜಾಸ್ತಿ ಇರ್ತಾರೆ. ನಮ್ಮಲ್ಲಿ ತಪ್ಪು ನಂಬಿಕೆ ಇದೆ. ಪ್ರಕೃತಿಯಿಂದ ದೇವರು ಸೃಷ್ಟಿಯಾಗುತ್ತೆ. ಪ್ರಕೃತಿಯಿಂದ ಸೃಷ್ಟಿಯಾಗೋದು ಹೆಣ್ಣು ದೇವತೆ. ಯಾವುದೇ ಕಾರ್ಯಕ್ರಮ ಶುರುವಾಗೋದು ಗ್ರಾಮ ದೇವತೆ ಇಂದ . ಹೀಗಾಗಿ ಹೆಣ್ಣು ದೇವತೆಯನ್ನು ಹೆಚ್ಚು ಪೂಜೆ ನಡೆಯುತ್ತೆ ಎಂದು ತಿಳಿಸಿದರು.
Key words: mysore-dasara-2019-God – Seniorwriter -SL Bhairappa- speech