ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್

ಬೆಂಗಳೂರು,ಡಿಸೆಂಬರ್,16,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ನಟ ದರ್ಶನ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿದ್ದು ಸರ್ಜರಿಗಾಗಿ ಕೆಂಗೇರಿಯ ಬಿಜಿಎಸ್  ಆಸ್ಪತ್ರೆ ದಾಖಲಾಗಿದ್ದ ನಟ ದರ್ಶನ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಒಂದುವರೆ ತಿಂಗಳ ಬಳಿಕ ಸರ್ಜರಿ ಮಾಡಿಸಿಕೊಳ್ಳದೇ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತೀಚೆಗೆ ಆರೋಪಿ ನಟ ದರ್ಶ‍ನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಈ ಬೆನ್ನಲ್ಲೆ ಅಪರೇಷನ್ ಮಾಡಿಸಿಕೊಳ್ಳದೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆನ್ನುನೋವು ಹಿನ್ನೆಲೆಯಲ್ಲಿ ಸರ್ಜರಿಗಾಗಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದ ನಟ ದರ್ಶನ್ ಇದೀಗ ಅಪರೇಷನ್ ಮಾಡಿಸಿಕೊಳ್ಳದೆಯೇ ಡಿಸ್ಚಾರ್ಜ್ ಆಗಿದ್ದು ಕಾರಿನಲ್ಲಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಪತ್ನಿ ವಿಜಯಲಕ್ಷ್ಮೀ  ಬಂದು ದರ್ಶನ್ ಅವರನ್ನ ಕರೆದೊಯ್ದಿದ್ದಾರೆ.

Key words:  Actor,  Darshan, discharged, Hospital