ಮುಂದುವರಿದ ಪಾರಂಪರಿಕ ಸಮಿತಿ ಹಾಗೂ ರೈಲ್ವೆ ಇಲಾಖೆಯ ಜಟಾಪಟಿ: ನಾವು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಮಾಡಿಲ್ಲ- ಡಿ.ಆರ್.ಎಂ ಅಪರ್ಣಾ ಗಾರ್ಗಿ ಸ್ಪಷ್ಟನೆ

ಮೈಸೂರು,ಮೇ,14,2019(www.justkannada.in): ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ವಿಚಾರಕ್ಕೆ  ಸಂಬಂಧಿಸಿದಂತೆ ಪಾರಂಪರಿಕ ಸಮಿತಿ ಹಾಗೂ ರೈಲ್ವೆ ಇಲಾಖೆಯ ನಡುವೆ ಜಟಾಪಟಿ ಮುಂದುವರೆದಿದೆ. ನಾವು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಮಾಡಿಲ್ಲ. ನಾವು ಯಾವುದೇ ತಪ್ಪು ಮಾಡಿದ್ದಲ್ಲಿ ನಮಗೆ ತಿಳಿಸಿ ಎಂದು ಪಾರಂಪರಿಕ ಸಮಿತಿಗೆ  ಡಿ.ಆರ್ ಎಂ. ಅಪರ್ಣಾ ಗಾರ್ಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಡಿ.ಆರ್.ಎಂ ಅಪರ್ಣಾ ಗಾರ್ಗಿ, ನಾವು ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಮಾಡಿಲ್ಲ. ನಾವು ಯಾವುದೇ ತಪ್ಪು ಮಾಡಿದ್ದಲ್ಲಿ ನಮಗೆ ತಿಳಿಸಿ. ಅದನ್ನ ನಾವು ಬದಲಾವಣೆ ಮಾಡಿ ತಿದ್ದುಕೊಳ್ಳುತ್ತೇವೆ. ನಿಮ್ಮ ಸಲಹೆಗಳನ್ನ ಪಡೆಯಲು  ನಾವು ಸಿದ್ದರಿದ್ದೇವೆ. ಅದನ್ನ ಬಿಟ್ಟು ನಮ್ಮ ಕೆಲಸ ತಡೆಯುವುದು ಸೂಕ್ತವಲ್ಲ. ನಮಗೂ ಪಾರಂಪರಿಕ ಕಟ್ಟಡಗಳ ಮೇಲೆ ಗೌರವವಿದೆ ಎಂದು ತಿಳಿಸಿದರು.

ನಾವು ಆಗಸ್ಟ್ 2018 ರಲ್ಲೇ ಮೈಸೂರು ಜಿಲ್ಲಾಧಿಕಾರಿಗಳಿಗೆ  ವರದಿ ನೀಡಿದ್ವಿ. ಆದ್ರೇ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಜಿಲ್ಲಾಧಿಕಾರಿಗಳು ನಮಗೆ ನೀಡಿಲ್ಲ. ಅವರನ್ನ ನಾವು ಇಲ್ಲಿ ಬಂದು ಸ್ಥಳ ಪರಿಶೀಲನೆ ಮಾಡುವಂತೆಯೂ ಸೂಚಿಸಿದ್ವಿ . ಅದ್ರೇ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಲ್ಲರಿಂದಲೂ ಒಪ್ಪಿಗೆ ಬಂದ ನಂತರ ಕೆಲಸ ಪ್ರಾರಂಭಿಸಲಾಗಿದೆ. ಸಾರಾ ಮಹೇಶ್ ಅವರು ಕೂಡ ನಮಗೆ ಸೂಚನೆ ನೀಡಿದ್ದರು.ಇಲ್ಲಿಯ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಕೆಲಸ ಮಾಡಿ ಎಂದಿದ್ದರು ಅದೇ ಅದೇ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ. ಮೇ ಅಂತ್ಯದೊಳೆಗೆ ಎಲ್ಲ ಕೆಲಸಗಳು ಮುಗಿಯ ಬೇಕಿತ್ತು. ಆದ್ರೇ ಕೊಂಚ ತಟವಾಗಿ ಕೆಲಸ ಮುಗಿಯಲಿದೆ. ಜೂನ್.30 ರೋಳಗೆ ಎಲ್ಲಾ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದರು.

ಈಗಾಗಲೇ ಮೇಲೆರುವ ಎಸ್ಕಲೇಟರ್ ಇದೆ. ಮುಂದಿನ ಎರಡು ತಿಂಗಳಲ್ಲಿ ಕೆಳಗೆ ಇಳಿಯುವ ಎಸ್ಕಲೇಟರ್ ಬರಲಿದೆ. ಎಸ್ಕಲೇಟರ್ ಅಲ್ಲದೇ ಸುಮಾರು 15 ಕೋಟಿ ರೂಗಳ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಕೆಲಸವು ಕಾಮಗಾರಿಗಳು ನಡೆಯಲಿದೆ ಎಂದು ಡಿ.ಆರ್. ಎಂ. ಅಪರ್ಣಾ ಗಾರ್ಗಿ  ತಿಳಿಸಿದರು.

Key words: Continued -Heritage -Committee – Railways-not- struck -traditional building-DRM- Aparna Gargi