ಚಾಮರಾಜನಗರ,ಡಿಸೆಂಬರ್,18,2024 (www.justkannada.in): ಇತ್ತೀಚಿನ ದಿನಗಳಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಾಗಿದ್ದು ಇದೀಗ ಕೆಎಸ್ ಆರ್ ಟಿಸಿ ಹೊರ ಗುತ್ತಿಗೆ ಚಾಲಕರ ನೇಮಕಾತಿಯಲ್ಲೂ ಲಂಚಾವತಾರದ ಆರೋಪ ಕೇಳಿ ಬಂದಿದೆ.
ಕೆಎಸ್ಆರ್ಟಿಸಿ ಇತ್ತೀಚಿಗೆ ಹೊರ ಗುತ್ತಿಗೆ ಮೂಲಕ ಚಾಲಕರ ನೇಮಕಾತಿ ಮಾಡಿಕೊಳ್ಳುತ್ತಿದ್ದು ಇದರಲ್ಲೂ ಮೇಲ್ಮಟ್ಟದ ಅಧಿಕಾರಿಗಳು ಸುಲಿಗೆಗೆ ಇಳಿದಿದ್ದಾರೆ. ಈ ಸಂಬಂಧ ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಡ್ರೈವರ್ ಒಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಹಣ ಕೊಟ್ರೆ ಟ್ರ್ಯಾಕ್ ಪರೀಕ್ಷೆ ಪಾಸ್, ಇಲ್ಲಂದ್ರೆ ಫೇಲ್. ಟ್ರ್ಯಾಕ್ ಪರೀಕ್ಷೆ ಪಾಸ್ ಆಗಲು 30 ರಿಂದ 40 ಸಾವಿರ ಫಿಕ್ಸ್ ಮಾಡಲಾಗಿದೆ. ಟ್ರ್ಯಾಕ್ ಪರೀಕ್ಷೆ ಪಾಸ್ ಆಗಿಲ್ಲ ಅಂದರೆ 40 ಸಾವಿರ ಕೊಡಬೇಕು ಎಂದು ವಿಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ಈ ವೇಳೆ ಮಾತನಾಡಿರುವ ಡ್ರೈವರ್ ನಾನು ಕೂಡ ಹಣ ಕೊಟ್ಟು ಟ್ರ್ಯಾಕ್ ಪರೀಕ್ಷೆ ಪಾಸ್ ಆದೆ ಎಂದಿದ್ದಾರೆ.
ಇದೀಗ ಅಧಿಕಾರಿಗಳು, ಏಜೆನ್ಸಿ ನಡುವಿನ ಒಳ ಒಪ್ಪಂದಕ್ಕೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದು ಹಣ ಕೊಟ್ಟರೆ ಡ್ರೈವಿಂಗ್ ಬರದಿದ್ದರೂ ಚಾಲಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ. ಸರಿಯಾಗಿ ಚಾಲನೆ ಮಾಡದೇ ಇರುವ ಚಾಲಕರ ನೇಮಕ ಮಾಡಿದ್ರೆ ಅಪಘಾತ ಸಂಭವಿಸಿ ಅಮಾಯಕ ಪ್ರಯಾಣಿಕರ ಜೀವ ಬಲಿಯಾದರೆ ಯಾರು ಹೊಣೆ ಜನ ಸಾಮಾನ್ಯರು ಪ್ರಶ್ನಿಸಿದ್ದಾರೆ.
Key words: Bribe , recruitment, KSRTC, drivers too