ಬೆಂಗಳೂರು,ಡಿಸೆಂಬರ್,19,2024 (www.justkannada.in): ಗೃಹಲಕ್ಷ್ಮೀ ಯೋಜನೆ ಹಣ ಕೂಡಿಸಿ ಮಹಿಳೆ ಮಾಂಗಲ್ಯ ಸರ ಖರೀದಿಸಿದ್ದು ಈ ವಿಚಾರವನ್ನ ಪ್ರಸ್ತಾಪಿಸಿ ಡಿಸಿಎಂ ಡಿಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ನಿಮ್ಮ ಮಂಗಳಸೂತ್ರ ಕಸಿಯುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಗೆ ಇದೀಗ ಟ್ವೀಟ್ ಮಾಡಿ ಟಾಂಗ್ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಹರಿಬಿಟ್ಟಿದ್ದ ಸುಳ್ಳು ಸುದ್ದಿಗಳು ಇದೀಗ ತಿರುಗುಬಾಣವಾಗಿ ಪರಿಣಮಿಸಿವೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರ ಕಸಿಯುತ್ತಾರೆ” ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಆದರೆ ಕೊಪ್ಪಳದ ಗಂಗಾವತಿಯಲ್ಲಿ ಗ್ಯಾರಂಟಿ ಫಲಾನುಭವಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಉಳಿಸಿ ಮಂಗಳಸೂತ್ರವನ್ನು ಖರೀದಿಸಿದ್ದಾರೆ.
ಸತ್ಯಕ್ಕೆ ಗೆಲುವು ಖಚಿತ, ಸುಳ್ಳಿಗೆ ಸೋಲು ನಿಶ್ಚಿತ! ಇದು ಸತ್ಯಕ್ಕೆ ಇರುವ ಶಕ್ತಿ ಎಂದು ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ಕುಟುಕಿದ್ದಾರೆ.
Key words: DCM, DK Shivakumar, BJP, Grihalakshmi money