ಬಿಜೆಪಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ: ಸಂಸದರೊಬ್ಬರಿಗೆ ಗಾಯ

ನವದೆಹಲಿ,ಡಿಸೆಂಬರ್,19,2024 (www.justkannada.in):  ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರೀ ಹೈಡ್ರಾಮಾ ನಡೆದಿದೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚನೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ನಾಯಕರು ಸಂಸತ್  ಮಕರ ದ್ವಾರದವರೆಗೆ ರ್ಯಾಲಿ ನಡೆಸಿದರು.  ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟದ ನಡೆ ಖಂಡಿಸಿ ಬಿಜೆಪಿ ಸಂಸದರಿಂದಲೂ ಅಂಬೇಡ್ಕರ್ ಅವರ ಫೋಟೊ ಹಿಡಿದು ಸಂಸತ್ ಅವರಣದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ಸಂಸದರು ಮುಖಾಮುಖಿಯಾಗಿದ್ದು ಈ ವೇಳೆ ಬಿಜೆಪಿ ಸಂಸದ  ಪ್ರತಾಪ್ ಸಾರಂಗಿ ಅವರು ಕುಸಿದು ಬಿದ್ದು ಗಾಯವಾಗಿದೆ. ರಾಹುಲ್ ಗಾಂಧಿ ನನ್ನನ್ನ ತಳ್ಳಿದರು ಎಂದು ಪ್ರತಾಪ್ ಸಾರಂಗಿ ಆರೋಪ ಮಾಡಿದ್ದಾರೆ. ಗಾಯಗೊಂಡ ಪ್ರತಾಪ್ ಸಾರಂಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: BJP, Congress,  protest, MP, injured