ಮೈಸೂರು,ಡಿಸೆಂಬರ್,19,2024 (www.justkannada.in): ವಿಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ತಾಮ್ರದ ವೈರ್ ಕಳ್ಳತನ ಮಾಡುತ್ತಿದ್ದ 7 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 7 ಲಕ್ಷ ಮೌಲ್ಯದ 600 ಕೆ ಜಿ ತೂಕದ ತಾಮ್ರದ ವೈರ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಟಾಟಾ ಸುಮೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮ್ಯಾಗ್ನೆಟಿಕ್ ಫ್ಯಾಕ್ಟರಿಯ ಕಿಟಕಿ ಗ್ರಿಲ್ಸ್ ಮುರಿದು ತಾಮ್ರದ ವೈರ್ ಗಳು, ಲ್ಯಾಪ್ ಟಾಪ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಕಳೆದ ನವೆಂಬರ್ 30ರಂದು ಕಳ್ಳತನ ಪ್ರಕರಣ ನಡೆದಿತ್ತು.
ವಿಜಯನಗರ ಪೊಲೀಸರು ದೂರು ಆಧರಿಸಿ ಆರೋಪಿಗಳ ಪತ್ತೆಗೆ ಇಳಿದಿದ್ದರು. ಇದೀಗ ಎಲ್ಲಾ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Key words: accused, arrested, stealing, copper wire