ಮೈಸೂರು,ಡಿಸೆಂಬರ್,19,2024 (www.justkannada.in): ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆಯಲ್ಲಿ ನಡೆದಿದೆ.
ಡಾ.ರೇಹಾನ್ ಅಹಮದ್ ಹಲ್ಲೆಗೆ ಒಳಗಾದ ವೈದ್ಯ. ನಿನ್ನೆ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆ ಘಟನೆ ನಡೆದಿದೆ. 7 ವರ್ಷದ ಬಾಲಕಿ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಳು. ಈ ಸಮಯದಲ್ಲಿ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರು ಅಲ್ ಅನ್ಸಾರ್ ಆಸ್ಪತ್ರೆಗೆ ಬಾಲಕಿಯನ್ನ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ. ರೇಹಾನ್ ಅಹಮದ್ ಕೂಡಲೇ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿದ್ದರು.
ಎಕ್ಸ್ ರೇ ವರದಿಯಲ್ಲಿ ಯಾವುದೇ ಮೂಳೆ ಮುರಿತದಂತಹ ಗಂಭೀರ ಗಾಯ ಇರಲಿಲ್ಲ ಎಂದು ಈ ವೇಳೆ ಬೆರಳಿನ ಗಾಯಕ್ಕೆ ವೈದ್ಯ ಡಾ.ರೇಹಾನ್ ಅಹಮದ್ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಇಬ್ಬರು ಪುರುಷರು ಎಮರ್ಜೆನ್ಸಿ ವಾರ್ಡಿಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟವಿ ಸೆರೆಯಾಗಿದೆ. ಈ ಸಂಬಂಧ ವೈದ್ಯ ಡಾ.ರೇಹಾನ್ ಅಹಮದ್ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Key words: mysore, assult, doctor