ಬೆಳಗಾವಿ,ಡಿಸೆಂಬರ್,21,2024 (www.justkannada.in): ಸಿ.ಟಿ ರವಿ ಅವರು ಆ ಪದ ಬಳಸಿಲ್ಲ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದು ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ದೇಶದಲ್ಲಿ ಇಂತಹ ಘಟನೆಗಳು ಹೊಸದಲ್ಲ. ಆದರೆ ಸಿಟಿ ರವಿ ಅವರೇ ಆ ಪದ ಬಳಸಿಲ್ಲ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದರು.
ಎನ್ ಕೌಂಟರ್ ಸಂಚು ಆರೋಪ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಿಟಿ ರವಿ ಶಾಸಕರು ಎನ್ ಕೌಂಟರ್ ಮಾಡಲು ಸಾಧ್ಯನಾ? ರವಿಗೆ ತೊಂದರೆ ಕೊಡಬೇಕು ಅಂತಾ ಸುತ್ತಾಡಿಸಿಲ್ಲ. ಹೋದ ಕಡೆಯಲ್ಲ ಬಿಜೆಪಿಗರು ಪ್ರತಿಭಟಿಸುತ್ತಿದ್ದರು. ಹಾಗಾಗಿ ಠಾಣೆಯಿದ ಠಾಣೆಗೆ ಕರೆದೊಯ್ದಿದ್ದಾರೆ ಎಂದು ’ ಪೊಲೀಸರ ನಡೆಯನ್ನ ಸಮರ್ಥಿಸಿಕೊಂಡರು.
Key words: CT Ravi, case, unnecessary, continue, Minister, Satish Jarkiholi