ಬೆಂಗಳೂರು,ಡಿಸೆಂಬರ್,21,2024 (www.justkannada.in): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಂಎಲ್ ಸಿ ಸಿ.ಟಿ ರವಿ ಅವರ ವಿರುದ್ದ ಅಗತ್ಯವಾಗಿ ಕಾನೂನು ಕ್ರಮ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಆಡಿರುವ ಮಾತು ವಿಡಿಯೋ ನೋಡಿದ್ದೇವೆ. ಇದು ಕಟ್ಟು ಕಥೆಯಲ್ಲ ಪರಿಷತ್ ನಲ್ಲಿ ಆನೇಕ ಸದಸ್ಯರೂ ಇದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಹೇಳಿಕೆ ಸಹಿಸಲಾಗುವುದಿಲ್ಲ ಎಂದರು.
ಈ ಹೇಳಿಕೆಗೆ ಅಗತ್ಯವಾಗಿ ಕಾನೂನು ಕ್ರಮ ಆಗಬೇಕಿದೆ, ಸಭಾಪತಿ ಹೊರಟ್ಟಿ ಅವರು ಈ ವಿಚಾರವನ್ನು ಪ್ರಿವಿಲೇಜ್ ಕಮಿಟಿಗೆ ಸಭಾಪತಿ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ವಿರೋಧವು ಇಲ್ಲ ಖಂಡನೆಯೂ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಕುಟುಕಿದರು.
Key words: Legal action, CT Ravi , Minister, Dinesh Gundu Rao