ಮಹಿಳಾ ಆಯೋಗದ ದೂರು ನಮ್ಮ ವ್ಯಾಪ್ತಿಗೆ ಬರಲ್ಲ- ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು,ಡಿಸೆಂಬರ್,23,2024 (www.justkannada.in):  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಬಂಸಿದಂತೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಹಿಳಾ ಆಯೋಗದ ದೂರು ನಮ್ಮ ವ್ಯಾಪ್ತಿಗೆ ಬರಲ್ಲ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಬಸವರಾಜ ಹೊರಟ್ಟಿ, ಮಹಿಳಾ ಆಯೋಗ ನನಗೆ ಪತ್ರ ಬರೆಯುವ ಅವಶ್ಯಕತೆ ಇಲ್ಲ. ಮಹಿಳಾ ಆಯೋಗದಿಂದ ನನಗೆ ಯಾವುದೇ ಪತ್ರ ಬಂದಿಲ್ಲ. ಮಹಿಳಾ ಆಯೋಗ ನನಗೆ ಸೂಚನೆ ಕೊಡಲು ಸಾಧ್ಯವಿಲ್ಲ ಆಯೋಗದ ದೂರು ನಮ್ಮ ವ್ಯಾಪ್ತಿಗೆ ಬರಲ್ಲ ಎಂದರು.

ಸದನ ಮುಂದೂಡಿದಾಗ ವಿಡಿಯೋ ರೆಕಾರ್ಡ್ ಆಗಿಲ್ಲ. ಇದು ಮುಗಿದ ಅಧ್ಯಾಯ ಕೂಲಂಕಷವಾಗಿ ಚರ್ಚಿಸಿದ್ದೇವೆ. ಸದನದ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದ  ಬಳಿಕ ಸಿಟಿ ರವಿ ಅವರನ್ನ ಬಂಧಿಸಿದ್ದಾರೆ. ಆದರೆ  ಎರಡು ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ನಮಗೆ ಹಕ್ಕುಚ್ಯುತಿ ಎಂದು ದೂರು ಬಂದರೇ ಪರಿಗಣಿಸುತ್ತೇವೆ ಎಂದರು.

ಸದನದಲ್ಲಿ ಪೊಲೀಸರು ಮಹಜರು ಮಾಡಕೂಡದು

ವಿಧಾನ್ ಪರಿಷತ್ ನ್ಲಿ ಪೊಲೀಸರು ಮಹಜರು ಮಾಡೋಕೆ ಬಂದಿದ್ದರು. ಸದನದಲ್ಲಿ ಪೊಲೀಸರು ಮಹಜರು ಮಾಡಕೂಡದು.  ಸದನದೊಳಗಿನ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು.’ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ ಎಂದು ಹೊರಟ್ಟಿ ತಿಳಿಸಿದರು.

Key words: Women, Commission, complaint, Basavaraj Horatti